Select Your Language

Notifications

webdunia
webdunia
webdunia
webdunia

ಶ್ರೀ ಮಾ ದುರ್ಗಾ ದೇವಸ್ಥಾನಕ್ಕೆ ಕನ್ನ, ಲಕ್ಷ ಲಕ್ಷ ನಗದು, ಚಿನ್ನಾಭರಣ ಲೂಟಿ

ಶ್ರೀ ಮಾ ದುರ್ಗಾ ದೇವಸ್ಥಾನಕ್ಕೆ ಕನ್ನ, ಲಕ್ಷ ಲಕ್ಷ ನಗದು, ಚಿನ್ನಾಭರಣ ಲೂಟಿ
ಆನೇಕಲ್ , ಬುಧವಾರ, 5 ಡಿಸೆಂಬರ್ 2018 (20:27 IST)
ದೇವಾಲಯದಲ್ಲಿ ಚಿನ್ನಾಭರಣ ಹಾಗು ಹುಂಡಿಯಲ್ಲಿರುವ ಹಣ ದೋಚಿದ ಕಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ.
ಕಳ್ಳತನ ಮಾಡುವ ಚಿತ್ರಣ ಸಿಸಿ ಟಿವಿ ಯಲ್ಲಿ ಸೆರೆಯಾಗಿದೆ.

ಬೆಂಗಳೂರು ಹೊರವಲಯ ಆನೇಕಲ್ ನ  ಮೈಲಾಸಂದ್ರ ದಿಣ್ಣೆಯ ಬಡಾವಣೆಯಲ್ಲಿರುವ ಶ್ರೀ ಮಾ ದುರ್ಗಾ ದೇವಸ್ಥಾನದಲ್ಲಿ ಕಳ್ಳತನವಾಗಿದೆ.

ಹುಂಡಿಯಲ್ಲಿದ್ದ ಎರಡು ಲಕ್ಷ ಹಣ, ದೇವರ ಮೇಲಿದ್ದ ಒಂದು ಚಿನ್ನದ ಸರ, ಕಿರೀಟ ದೋಚಿದ ಖದೀಮರು 
ಕಳ್ಳತನ ಮಾಡಿ ಹುಂಡಿ ಸಮೇತ  ಪರಾರಿಯಾಗಿದ್ದಾರೆ. ಹುಂಡಿಯನ್ನು ಹೊತ್ತುಕೊಂಡು ಹೋಗಿ 500 ಅಡಿ ದೂರದಲ್ಲಿ ಹುಂಡಿಯನ್ನು ಬಿಸಾಕಿ ಹೋಗಿದ್ದಾರೆ. ಬೆಳ್ಳಿಗ್ಗೆ 5 ಗಂಟೆಗೆ ಪೂಜೆ ಮಾಡಲು ಬಂದಾಗ ಅರ್ಚಕನಿಗೆ ಕಳ್ಳತನವಾಗಿರುವುದು ಕಂಡು ಬಂದಿದೆ.

ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ತಾಕತ್ ಇದ್ದರೆ ಶಾಸಕರನ್ನ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲಿ ಎಂದು ಕಾಂಗ್ರೆಸ್, ಜೆಡಿಎಸ್ ಗೆ ಸವಾಲೆಸೆದ ಶ್ರೀರಾಮುಲು