Select Your Language

Notifications

webdunia
webdunia
webdunia
webdunia

ದೇವರ ಪ್ರಭಾವಳಿ, ಮುಖವಾಡ ಎಗರಿಸಿದ ಕಳ್ಳರು

ದೇವಸ್ಥಾನ
ತಡರಾತ್ರಿ ದೇವಸ್ಥಾನದ ಬಾಗಿಲು ಮುರಿದು ಕಳ್ಳರು ತಮ್ಮ ಕೈಚಳಕ ತೋರಿದ ಘಟನೆ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ದೊಡ್ಡಕೋಲಿಗ ಗ್ರಾಮದ ಶಿವನ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ತಡರಾತ್ರಿ ದೇವಸ್ಥಾನಕ್ಕೆ ಬಂದ ಕಳ್ಳರಿಂದ ದೇವರ ಪ್ರಭಾವಳಿ, ಮುಖವಾಡ ಮತ್ತು ಹುಂಡಿಯಲ್ಲಿದ್ದ ಹಣ ಎಗರಿಸಿ ಪರಾರಿಯಾಗಿದ್ದಾರೆ.

ಬೆಳಗ್ಗೆ ಪೂಜೆ ಮಾಡಲು ಪೂಜಾರಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆ ಅಗೆದು ವರ್ಷದಿಂದ ಗುಂಡಿ ಮುಚ್ಚದೆ ಬಿಟ್ರು: ಗ್ರಾಮಸ್ಥರು ಮಾಡಿದ್ದೇನು ಗೊತ್ತಾ?