Select Your Language

Notifications

webdunia
webdunia
webdunia
webdunia

ದೇವಾಲಯದಲ್ಲಿ ಕಳ್ಳತನ ಮಾಡುತ್ತಿದ್ದವರ ಬಂಧನ

ದೇವಾಲಯದಲ್ಲಿ ಕಳ್ಳತನ ಮಾಡುತ್ತಿದ್ದವರ ಬಂಧನ
ಕಲಬುರಗಿ , ಗುರುವಾರ, 29 ನವೆಂಬರ್ 2018 (18:51 IST)
ತಮ್ಮ ಕಷ್ಟ ಪರಿಹಾರವಾಗಲಿ, ಆಸೆಗಳು ಈಡೇರಲಿ ಎಂದು ಭಕ್ತರು ದೇವರ ಮೊರೆ ಹೋಗುತ್ತಾರೆ. ಆದರೆ ಭಕ್ತರ ಬಳಿಯಿದ್ದ ಹಣ, ಚಿನ್ನಾಭರಣವನ್ನು ಖತರನಾಕ್ ಕಳ್ಳರು ದೋಚುತ್ತಿದ್ದರು. ದೇವಾಲಯಗಳಲ್ಲಿ ಕಳ್ಳತನ ಮಾಡುತ್ತಿದ್ದವರು ಈಗ ಅಂದರ್ ಆಗಿದ್ದಾರೆ.

ರಾಜ್ಯದ ಪ್ರಖ್ಯಾತ ದೇಗುಲಗಳಲ್ಲಿ ಒಂದಾಗಿರುವ ಕಲಬುರಗಿ ಜಿಲ್ಲೆಯ ಗಾಣಗಾಪುರದಲ್ಲಿರುವ ದತ್ತಾತ್ರೇಯ ದೇವಸ್ಥಾನ ಹಾಗೂ ಸಂಗಮದಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ದೇವಲಗಾಣಗಾಪುರ ಠಾಣೆಯ ಪೊಲೀಸರು ತಂಡ ರಚಿಸಿಕೊಂಡು ಕುಖ್ಯಾತ ಕಳ್ಳರನ್ನು ಬಂಧನ ಮಾಡಿದ್ದಾರೆ. ಮಹಾರಾಷ್ಟ್ರ ಮೂಲದ ನಂದಾ ಗಾಯಕವಾಡ, ಮಂಗಲಾ ಜಾಧವ ಬಂಧನಕ್ಕೆ ಒಳಗಾದವರಾಗಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಂಪುಟ ವಿಸ್ತರಣೆಗೆ ನಿಗದಿಯಾಗದ ಮುಹೂರ್ತ: ಶಾಸಕರು ಅಸಮಧಾನ