Select Your Language

Notifications

webdunia
webdunia
webdunia
webdunia

ಸಾಲದಿಂದ ಮುಕ್ತಿ ಹೊಂದಲು ಮಂಗಳವಾರದಂದು ಆಂಜನೇಯ ಸ್ವಾಮಿಗೆ ಇದನ್ನು ಅರ್ಪಿಸಿ

ಸಾಲದಿಂದ ಮುಕ್ತಿ ಹೊಂದಲು ಮಂಗಳವಾರದಂದು ಆಂಜನೇಯ ಸ್ವಾಮಿಗೆ ಇದನ್ನು ಅರ್ಪಿಸಿ
ಬೆಂಗಳೂರು , ಬುಧವಾರ, 5 ಡಿಸೆಂಬರ್ 2018 (11:16 IST)
ಬೆಂಗಳೂರು : ಸಮಸ್ಯೆಗಳಿಂದ ತುಂಬಾ ಜನರು ಸಾಲವನ್ನು ಮಾಡಿರುತ್ತಾರೆ. ಈ ಸಾಲವನ್ನು ಮರುಪಾವತಿ ಮಾಡಲು ಆಗದೆ ತುಂಬಾ ಕಷ್ಟಗಳನ್ನು ಅನುಭವಿಸುತ್ತಿರುತ್ತಾರೆ. ಇಂಥವರು ಮಂಗಳವಾರದಂದು ಈ ಚಿಕ್ಕ ಪರಿಹಾರ ಕ್ರಮವನ್ನು ಪಾಲಿಸಿದರೆ ನಿಮ್ಮಸಾಲಗಳೆಲ್ಲಾ ತೀರಿ ಹೋಗುತ್ತದೆ.


ಮಂಗಳವಾರ ಸೂರ್ಯೋದಯಕ್ಕೂ ಮುಂಚೆ ಎದ್ದು ತಲೆ ಸ್ನಾನವನ್ನು ಮಾಡಿ ಮನೆಯನ್ನು ಸ್ವಚ್ಚಗೊಳಿಸಿ ನಂತರ ಅರಳಿ ಮರದ 11 ಎಲೆಗಳನ್ನು ತಂದು ಸ್ವಚ್ಚ ಮಾಡಿ ಗಂಗಾಜಲದಿಂದ ಶುದ್ಧಿಗೊಳಿಸಿ. ನಂತರ ಕೆಂಪು ಚಂದನವನ್ನು ಗಂಗಾಜಲದಲ್ಲಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ 11ಅರಳಿ ಎಲೆಯ ಮೇಲೆ ಸೀತಾರಾಂ ಎಂದು ಬರೆದು ಒಂದೊಂದು ಲವಂಗವನ್ನು ಇಡಬೇಕು. ನಂತರ ಒಂದು ವಸ್ತ್ರದ ಮೇಲೆ ಆ 11 ಎಲೆಗಳನ್ನು ಒಂದರ ಮೇಲೆ ಒಂದನ್ನು ಇಟ್ಟು ಮೂಟೆ ಕಟ್ಟಬೇಕು.


ನಂತರ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ತೆರಳಿ ಅದನ್ನು ದೇವರಿಗೆ ಅರ್ಪಿಸಬೇಕು. ಹೀಗೆ 11 ಮಂಗಳವಾರ ಈ ನಿಯಮವನ್ನು ಶ್ರದ್ಧೆ ಭಕ್ತಿಯಿಂದ ಪಾಲಿಸಿದರೆ ಸಾಲಗಳಿಂದ ಮುಕ್ತಿ ಸಿಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಮಾವಾಸ್ಯೆಯ ದಿನ ಶಿವನಿಗೆ ಇವುಗಳನ್ನು ಅರ್ಪಿಸಿದರೆ ಆರ್ಥಿಕ ಸಮಸ್ಯೆ ದೂರವಾಗುತ್ತದೆಯಂತೆ