ಅಂಬರೀಶ್ ಸ್ವಗ್ರಾಮದಲ್ಲಿ ತಿಥಿ ಕಾರ್ಯ

ಗುರುವಾರ, 6 ಡಿಸೆಂಬರ್ 2018 (16:25 IST)
ನಟ  ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ಅವರ ಸ್ವಗ್ರಾಮ ದೊಡ್ಡರಸಿನಕೆರೆ ಗ್ರಾಮದಲ್ಲಿ ಅಂಬಿ ತಿಥಿ ಕಾರ್ಯ ನಡೆಯಿತು. ಗ್ರಾಮಸ್ಥರೆಲ್ಲ ಸೇರಿಕೊಂಡು ಅಂಬರೀಶ್ ತಿಥಿ ಕಾರ್ಯವನ್ನು ನೆರವೇರಿಸಿದರು.

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ದೊಡ್ಡರಸಿನಕೆರೆ ಅಂಬಿಯ ತಿಥಿ ಕಾರ್ಯಪೂರ್ಣಗೊಳಿಸಲಾಯಿತು.
ತಾತ್ಕಾಲಿಕವಾಗಿ ಗ್ರಾಮದಲ್ಲಿ ಅಂಬರೀಶ್ ಸಮಾಧಿ ನಿರ್ಮಾಣ ಮಾಡಲಾಗಿದೆ. ತಿಥಿ ಕಾರ್ಯಕ್ಕೂ ಮೊದಲು ಹೋಮ, ಪೂಜೆ ವಿಧಿವಿಧಾನಗಳು ನೆರವೇರಿದವು.

ಕೇಶಮುಂಡನ ಮಾಡಿಸಿಕೊಂಡು ಅಂಬಿ ತಿಥಿ ಕಾರ್ಯದ ವಿಧಿವಿಧಾನಗಳನ್ನು ಗ್ರಾಮಸ್ಥರು ನಡೆಸಿದರು.
ತಿಥಿ ಕಾರ್ಯ ಮುಗಿದ ಬಳಿಕ ಸುಮಾರು ಎರಡು ಗುಂಟೆ ಜಾಗದಲ್ಲಿ ಅಂಬರೀಶ್ ಪಾರ್ಕ್ ನಿರ್ಮಾಣ ಮಾಡುವ ಕುರಿತು ಚರ್ಚೆ ನಡೆಸಲಾಯಿತು. ಪಾರ್ಕ್ ಒಳಗೆ ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಸಿದ್ಧತೆಗೆ ಚಾಲನೆ ನೀಡಲಾಯಿತು.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಾನು ಸಿಎಂ ಆಕಾಂಕ್ಷಿಯಲ್ಲ ಅಂತ ಪ್ರಭಾವಿ ಸಚಿವ ಹೇಳಿದ್ದೇಕೆ?