Publish Date: Tue, 04 Dec 2018 (19:15 IST)
Updated Date: Tue, 04 Dec 2018 (19:16 IST)
ಮಂಡ್ಯದ ಗಂಡು ಅಂಬರೀಶ್ ನಿಧನರಾದ ಹಿನ್ನಲೆಯಲ್ಲಿ ಅವರ ಪುಣ್ಯತಿಥಿಯನ್ನು ಅಭಿಮಾನಿಗಳು ಆಚರಣೆ ಮಾಡಿದರು.
ಮಂಡ್ಯ ಜಿಲ್ಲೆಯ ಹಲವೆಡೆ ಅಂಬಿ ಪುಣ್ಯ ತಿಥಿ ಆಚರಣೆ ನಡೆಯಿತು.
ಅಂಬಿ ಅಭಿಮಾನಿಗಳೇ ಸೇರಿ ಗ್ರಾಮದಲ್ಲಿ ಅಂಬಿ ಪುಣ್ಯ ತಿಥಿ ಅಚರಣೆಗೆ ನಿರ್ಧಾರ ಮಾಡಿದ್ದರು.
ಅಂಬರೀಶ್ ನಿಧನರಾದ ದಿನ ಆಧರಿಸಿ 11ನೇ ದಿನದ ಪುಣ್ಯ ತಿಥಿ ಕಾರ್ಯವನ್ನು ಅಂಬಿ ಅಭಿಮಾನಿಗಳು ಮಾಡಿದರು.
ಮದ್ದೂರಿನ ತೈಲೂರು, ಮಂಡ್ಯದ ಕಾರಸವಾಡಿ ಹಾಗೂ ಶ್ರೀರಂಗಪಟ್ಟಣ ಬಲ್ಲೇನಹಳ್ಳಿ ಗ್ರಾಮದಲ್ಲಿ ಅಂಬಿ ತಿಥಿ ಆಚರಣೆ ಮಾಡಲಾಯಿತು.
ಅಂಬಿ ಪುಣ್ಯ ತಿಥಿಗಾಗಿ ಗ್ರಾಮಗಳಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಅಂಬಿ ಪುಣ್ಯತಿಥಿಗಾಗಿ ಬಾಡೂಟ ಸಿದ್ಧಪಡಿಸಲಾಗಿತ್ತು.