Select Your Language

Notifications

webdunia
webdunia
webdunia
webdunia

ಅಂಬರೀಶ್ ನಿಧನದ ವಿಚಾರ ಈ ನಟಿಗೆ ತಿಳಿದೇ ಇಲ್ಲವಂತೆ!

ಅಂಬರೀಶ್ ನಿಧನದ ವಿಚಾರ ಈ ನಟಿಗೆ ತಿಳಿದೇ ಇಲ್ಲವಂತೆ!
ಬೆಂಗಳೂರು , ಶನಿವಾರ, 1 ಡಿಸೆಂಬರ್ 2018 (07:14 IST)
ಬೆಂಗಳೂರು : ರೆಬಲ್ ಸ್ಟಾರ್ ಅಂಬರೀಶ್ ನಿಧನರಾಗಿ ನಿನ್ನಗೆ 6 ದಿನಗಳು ಕಳೆದಿದೆ. ಆದರೆ ಸ್ಯಾಂಡಲ್ ವುಡ್ ನ ನಟಿಯೊಬ್ಬರಿಗೆ ಈ ವಿಚಾರ ತಿಳಿದೇ ಇಲ್ಲವಂತೆ.


ಹೌದು. ರೆಬಲ್ ಸ್ಟಾರ್ ಅಂಬರೀಶ್ ಅವರು ನ.25ರಂದು ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಸುದ್ಧಿ ಕೇಳಿ ಅವರ ಅಂತಿಮ ದರ್ಶನ ಪಡೆಯಲು ಎಲ್ಲಾ ಕಡೆಯಿಂದ ಜನರ ದಂಡೆ ಹರಿದುಬಂದಿದೆ. ಆದರೆ ನಟಿ ಹರ್ಷಿಕಾ ಪೂಣಚ್ಚ ಅವರಿಗೆ ನಟ ಅಂಬರೀಶ್ ನಿಧನದ ಬಗ್ಗೆ ಶುಕ್ರವಾರ ತಿಳಿಯಿತಂತೆ.


ಈ ವಿಚಾರವನ್ನು ಟ್ವೀಟರ್ ನಲ್ಲಿ ವ್ಯಕ್ತಪಡಿಸಿದ ನಟಿ ಹರ್ಷಿಕಾ ಪೂಣಚ್ಚ, ‘ಇಂದು ನನಗೆ ಅತ್ಯಂತ ದುಃಖದ ದಿನ . ನವೆಂಬರ್ 23 ರಂದು ನಾನು ಶೂಟಿಂಗ್ ​ ನಲ್ಲಿದ್ದೆ , ನೆಟ್ ​ ವರ್ಕ್ ಇಲ್ಲದ ಜಾಗದಲ್ಲಿ ಇದ್ದೆವು . ಹೀಗಾಗಿ ನನಗೆ ಅಂಬರೀಶ್ ಅವರ ನಿಧನದ ವಿಷಯ ಈಗ ತಿಳಿಯಿತು . ನಾನು ತುಂಬ ದುರಾದೃಷ್ಟವಂತೆ , ಕೊನೆಯದಾಗಿ ಅಂಬಿ ಅಂಕಲ್ ಅವರನ್ನು ನೋಡುವ ಅವಕಾಶವೂ ಸಿಕ್ಕಿಲ್ಲ’ ಎಂದು ಮರುಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಅಂಬರೀಶ್ ಮಾಮನ ನೆನೆದು ಭಾವುಕರಾದ ಕಿಚ್ಚ ಸುದೀಪ್