ಅಂಬರೀಶ್ ಗೆ ಅಭಿಮಾನಿಗಳಿಂದಲೇ ತಿಥಿ ಕಾರ್ಯ!

ಮಂಗಳವಾರ, 4 ಡಿಸೆಂಬರ್ 2018 (10:14 IST)
ಮಂಡ್ಯ: ಇತ್ತೀಚೆಗಷ್ಟೇ ನಿಧನರಾದ ಹಿರಿಯ ನಟ, ರಾಜಕಾರಣಿ ಅಂಬರೀಶ್ ಅವರನ್ನು ಮಂಡ್ಯದ ಜನ ತಮ್ಮ ಮನೆ ಮಗ ಎಂದೇ ಅಂದುಕೊಂಡಿದ್ದರು. ಹೀಗಾಗಿ ಅಂಬರೀಶ್ ವೈಕುಂಠ ಸಮಾರಾಧನೆ ಕಾರ್ಯಕ್ರಮವನ್ನು ಅಭಿಮಾನಿಗಳೇ ನೆರವೇರಿಸಲಿದ್ದಾರೆ.


ತಮ್ಮ ಮನೆಯ ಸದಸ್ಯರ ತಿಥಿ ಕಾರ್ಯದಂತೆ ಅಂಬರೀಶ್ ಅವರ 11 ನೇ ದಿನದ ಕಾರ್ಯವನ್ನು ಮಂಡ್ಯದ ಗೆಜ್ಜಲಗೆರೆಯಲ್ಲಿ ಅಭಿಮಾನಿಗಳೇ ಶಾಸ್ತ್ರೋಸ್ತ್ರಕವಾಗಿ ನೆರವೇರಿಸಲಿದ್ದಾರೆ. ಈಗಾಗಲೇ ಅಭಿಮಾನಿಗಳು ಇದಕ್ಕಾಗಿ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.

ಅಂಬರೀಶ್ ಚಿತಾಭಸ್ಮವನ್ನು ತಂದು ಪೂಜೆ ಮಾಡಲಿರುವ ಅಭಿಮಾನಿಗಳು ಸುಮಾರು 5000 ಮಂದಿಗೆ ಭೋಜನ ವ್ಯವಸ್ಥೆ ಕಲ್ಪಿಸಲಿದ್ದಾರೆ. ಭೋಜನಕ್ಕೆ ಅಂಬರೀಶ್ ಗೆ ಇಷ್ಟವಾಗುವ ನಾಟಿ ಕೋಳಿ, ಮುದ್ದೆ ಮಾಡಿ ಉಣಬಡಿಸಲಿದ್ದಾರೆ. ಅಂತೂ ತಮ್ಮ ಮನೆಯ ಸದಸ್ಯನ ತಿಥಿ ಕಾರ್ಯದಂತೆ ಇಲ್ಲಿ ಅಭಿಮಾನಿಗಳು ಅಂಬರೀಶ್ ಕಾರ್ಯವನ್ನು ನೆರವೇರಿಸಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಧಿಕಾರ ಬೇಡ ಎನ್ನಲು ನಾವೇನು ಸನ್ಯಾಸಿಗಳಲ್ಲ: ಕೋಟಾ ಶ್ರೀನಿವಾಸ್ ಪೂಜಾರಿ