ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ ಮಧ್ಯೆ ಶ್ರೀಲಂಕಾದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿವೆ..ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿ ಲೂಟಿ & ಇತರರಿಗೆ ಹಾನಿ ಮಾಡುವ ವ್ಯಕ್ತಿಗಳು ಯಾರೇ ಆದ್ರೂ ಅವರಿಗೆ ಗುಂಡು ಹಾರಿಸುವಂತೆ ಶ್ರೀಲಂಕಾದ ರಕ್ಷಣಾ ಸಚಿವಾಲಯ ಆದೇಶಿಸಿದೆ..ನಿನ್ನೆ ಸೇನೆ, ವಾಯುಪಡೆ ಮತ್ತು ನೌಕಾಪಡೆಯ ಸಿಬ್ಬಂದಿಗೆ ಆದೇಶ ನೀಡಲಾಗಿದೆ..ನಾಗರಿಕರ ವಿರುದ್ಧ ಹಿಂಸಾಚಾರ & ಸೇಡಿನ ಕ್ರಮಗಳನ್ನು ನಿಲ್ಲಿಸುವಂತೆ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಜನರಲ್ಲಿ ಮನವಿ ಮಾಡಿದ್ದಾರೆ..ಅಲ್ಲದೇ, ಲೂಟಿ & ಆಸ್ತಿ ಹಾನಿ ಮುಂದುವರಿದರೆ, ಉಲ್ಲಂಘಿಸುವವರ ವಿರುದ್ಧ ಕಾನೂನು
ಕಟ್ಟು ನಿಟ್ಟಾಗಿ ಕ್ರಮ ಜಾರಿಗೊಳಿಸಲು ರಕ್ಷಣಾ ಸಚಿವಾಲಯವನ್ನು ಒತ್ತಾಯಿಸಲಾಗುತ್ತೆ ಎಂದು ಎಚ್ಚರಿಕೆ ನೀಡಿದ್ರು.