Select Your Language

Notifications

webdunia
webdunia
webdunia
webdunia

ಬೀಗ ಹಾಕಿರುವ ಮನೆಗಳ ಬಾಗಿಲಿನ ಬೀಗ ಮುರಿಯುತ್ತಿರುವ ಕಳ್ಳರು

ಬೀಗ ಹಾಕಿರುವ ಮನೆಗಳ ಬಾಗಿಲಿನ ಬೀಗ ಮುರಿಯುತ್ತಿರುವ ಕಳ್ಳರು
bangalore , ಶನಿವಾರ, 11 ಡಿಸೆಂಬರ್ 2021 (20:51 IST)
ಬೀಗ ಹಾಕಿರುವ ಮನೆಗಳನ್ನು ಗುರುತಿಸಿಕೊಂಡು ಮನೆ ಬಾಗಿಲು ಅಥವಾ ಬೀಗ ಮುರಿದು ಒಳನುಸುಳಿ ನಗದು, ಚಿನ್ನಾಭರಣ ಕಳವು ಮಾಡುತ್ತಿದ್ದವನನ್ನು ಬ್ಯಾಡರಹಳ್ಳಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ. 
ಕಾಂತರಾಜು (47) ಬಂಧಿತ. ಆರೋಪಪಿಯಿಂದ ಐದು ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನಾಭರಣ, 700 ಗ್ರಾಂ ಬೆಳ್ಳಿವಸ್ತುಗಳನ್ನು  ವಶಪಡಿಸಿಕೊಳ್ಳಲಾಗಿದೆ ಎಂದು ಪೆÇಲೀಸರು ತಿಳಿಸಿದರು. 
ಫೆ.2ರಂದು ಬೆಳಗ್ಗೆ 11 ಗಂಟೆ ಸಮಯದಲ್ಲಿ ದೂರುದಾರರು ತಮ್ಮ ಮನೆಗೆ ಬೀಗ ಹಾಕಿ ಕುಟುಂಬ ಸಮೇತ ಸಂಬಂಧಿಕರ ಮನೆಗೆ ತೆರಳಿದ್ದರು. ಇದನ್ನೇ ಗಮನಿಸುತ್ತಿದ್ದ ಕಾಂತರಾಜು ಬೀಗ ಮುರಿದು ಕಳ್ಳತನ ಮಾಡಿದ್ದ. ಫೆ. 3ರಂದು ವಾಪಸ್ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಕಳವಾಗಿರುವುದು ಗೊತ್ತಾಗಿತ್ತು. ಕೂಡಲೇ ಮಾಲೀಕರು ಬ್ಯಾಡರಹಳ್ಳಿ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ವಾಹನಗಳ ಟೋಯಿಂಗ್ ವೇಳೆ ಧ್ವನಿವರ್ಧಕಗಳ ಮೂಲಕ ಮುನ್ಸೂಚನೆ