Select Your Language

Notifications

webdunia
webdunia
webdunia
Sunday, 6 April 2025
webdunia

ದುಬಾರಿ ಮೌಲ್ಯದ ಸೈಕಲ್ ಕಳವು ಮಾಡಿದ ಕಳ್ಳರು

Thieves who stole expensive bicycles
bangalore , ಬುಧವಾರ, 22 ಸೆಪ್ಟಂಬರ್ 2021 (21:47 IST)
ಬೆಂಗಳೂರು: ದುಬಾರಿ ಮೌಲ್ಯದ ಸೈಕಲ್ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.
ಸಿಟಿ ಮಾರ್ಕೆಟ್ ಕೂಲಿ ಕಾರ್ಮಿಕ ರಫೀಕ್ ಮತ್ತು ದೊಡ್ಡಬಳ್ಳಾಪುರದ ಆದಿಲ್ ಬಂಧಿತ ಆರೋಪಿಗಳು.
ಸುಮಾರು 10 ಸಾವಿರದಿಂದ 80 ಸಾವಿರ ರೂ. ಮುಖಬೆಲೆಯ 10 ಲಕ್ಷ ರೂ. ಮೌಲ್ಯದ ಒಟ್ಟು 45 ಸೈಕಲ್ ಅನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಟಿ ಮಾರ್ಕೆಟ್‌ನಲ್ಲಿ ಕೂಲಿ ಕೆಲಸಗಾರ ರಫೀಕ್, ಪ್ರತಿಷ್ಠಿತ ಕಂಪನಿಯ ಸೈಕಲ್‌ಗಳನ್ನು ಕಳವು ಮಾಡಿದರೆ ಹೆಚ್ಚಿನ ಹಣ ಸಿಗುತ್ತದೆ ಮತ್ತು ಪೊಲೀಸರು ಸಹ ಪತ್ತೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಪ್ಲ್ಯಾನ್ ಮಾಡಿ ದೊಡ್ಡಬಳ್ಳಾಪುರದ ತನ್ನ ಸ್ನೇಹಿತ ಆದಿಲ್‌ಗೆ ಹಣದ ಆಮಿಷವೊಡ್ಡಿದ್ದ. ಆನಂತರ ಇಬ್ಬರು ಸೇರಿಕೊಂಡು ಕೆಲ ತಿಂಗಳಿಂದ ಸಂಜೆ ವೇಳೆ ಶ್ರೀಮಂತರ ಬಡಾವಣೆಗಳಲ್ಲಿ ಸುತ್ತಾಡಿಕೊಂಡು ಮನೆ ಬಳಿ ನಿಲ್ಲಿಸಿರುವ ಸೈಕಲ್‌ಗಳನ್ನು ಗುರುತಿಸಿ ರಾತ್ರಿ ಸಮಯದಲ್ಲಿ ಹೋಗಿ ಕಳವು ಮಾಡುತ್ತಿದ್ದರು. ಸಂಜಯನಗರ, ಹೆಬ್ಬಾಳ, ಮಾರತ್ತಹಳ್ಳಿ, ನಂದಿನಿಲೇಔಟ್, ಯಲಹಂಕ ನ್ಯೂಟೌನ್, ಅಮೃತಹಳ್ಳಿ, ಹೈಗ್ರೌಂಡ್ ಸೇರಿದಂತೆ ನಗರದ ವಿವಿಧೆಡೆ ಬೆಲೆ ಬಾಳುವ ಸೈಕಲ್ ಕಳವು ಮಾಡುತ್ತಿದ್ದರು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೆಟ್ರೋ 3ನೇ ಹಂತಕ್ಕೆ ಶೀಘ್ರ ಚಾಲನೆ: ಮುಖ್ಯಮಂತ್ರಿ ಸೂಚನೆ