Select Your Language

Notifications

webdunia
webdunia
webdunia
webdunia

ಮಾಪನ ಸೌಧ ಉದ್ಘಾಟಿಸಿದ ಸಿ. ಎಂ ಬೊಮ್ಮಾಯಿ: ಇಲಾಖೆಗೆ ಹೊಸ ಟಚ್ ನೀಡಲಿರುವ ಕಟ್ಟಡ

ಮಾಪನ ಸೌಧ ಉದ್ಘಾಟಿಸಿದ ಸಿ. ಎಂ ಬೊಮ್ಮಾಯಿ: ಇಲಾಖೆಗೆ ಹೊಸ ಟಚ್ ನೀಡಲಿರುವ ಕಟ್ಟಡ
bangalore , ಬುಧವಾರ, 22 ಸೆಪ್ಟಂಬರ್ 2021 (21:37 IST)
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ನಗರದ ಅಲಿ ಅಸ್ಗರ್ ರಸ್ತೆಯಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆಯ ನೂತನ  ಮಾಪನ ಸೌಧ ಕಟ್ಟಡವನ್ನು ಉದ್ಘಾಟಿಸಿದರು. ಅರಣ್ಯ ಹಾಗೂ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಉಮೇಶ್ ಕತ್ತಿ  ಶಾಸಕ ರಿಜ್ವಾನ್ ಅರ್ಷದ್ ಸೇರಿದಂತ  ಗಣ್ಯರು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
 
ಕಾನೂನು ಮತ್ತು ಮಾಪನ ಶಾಸ್ತ್ರ ಇಲಾಖೆಗೆ ನೂತನ ಟಚ್: 
 
ಕಾನೂನು ಮತ್ತು ಮಾಪನ ಶಾಸ್ತ್ರ ಇಲಾಖೆಯು ತೂಕ ಮತ್ತು ಅಳತೆಗಳಲ್ಲಿ ಮೋಸವಾಗುವುದನ್ನು ತಡೆಗಟ್ಟಿ ಗ್ರಾಹಕರ ಹಿತರಕ್ಷಣೆಯನ್ನು ಕಾಪಾಡುವ ಇಲಾಖೆಯಾಗಿದೆ. ಬೆಂಗಳೂರಿನ ಆಲಿ ಆಸ್ಕರ್ ರಸ್ತೆಯ ಕಾನೂನು ಮಾಪನಶಾಸ್ತ್ರ ಇಲಾಖೆಯ ಕೇಂದ್ರ ಕಛೇರಿಯ ಪಕ್ಕದಲ್ಲೇ ನೂತನ ಕಟ್ಟಡ   ಕಾರ್ಯನಿರ್ವಹಿಸುತ್ತಿದೆ.  ಕಚೇರಿಯ ಆವರಣದಲ್ಲಿ ನೂತನವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಿಡುಗದ ಆಗಿರುವ ರೂ.4.50 ಕೋಟಿ ರೂ ಅನುದಾನದಲ್ಲಿ 4 ಅಂತಸ್ತಿನ ಕಟ್ಟಡ ಮಾಪನಸೌಧ ನಿರ್ಮಾಣ ಮಾಡಲಾಗಿದ್ದು ಇಲಾಖೆಗೆ ನೂತನ ಟಚ್ ಸಿಗಲಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ
 
ಕಟ್ಟಡದಲ್ಲಿ ಬೆಂಗಳೂರು ನಗರದಾದ್ಯಂತ ಕಾರ್ಯನಿರ್ವಹಿಸುತ್ತಿರುವ 16 ಕಚೇರಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಪ್ರತಿ ತಿಂಗಳು ಸುಮಾರು  3 ರೂ ಲಕ್ಷ ಬಾಡಿಗೆ ಉಳಿತಾಯವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 
2015ನೇ ಸಾಲಿನಿಂದಲೂ ರಾಜ್ಯಾದ್ಯಂತ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ಹಂತ ಹಂತವಾಗಿ ಸ್ವಂತ ಕಟ್ಟಡಗಳನ್ನು ನಿರ್ಮಿಸಿಕೊಳ್ಳಲಾಗುತ್ತಿದೆ. ಇಲ್ಲಿಯವರೆಗೆ 19 ಸ್ವಂತ ಕಟ್ಟಡಗಳನ್ನು ಇಲಾಖೆಯಿಂದ ನಿರ್ಮಿಸಲಾಗಿದೆ ಎಂದಿದ್ದಾರೆ.
 
ಈ  ರೀತಿಯಲ್ಲಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ರಾಜ್ಯದ ಎಲ್ಲಾ ಕಛೇರಿಗಳು ಸ್ವಂತ
ಕಟ್ಟಡ ಹೊಂದುವಂತೆ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
 
ಕಾನೂನು ಮಾಪನಶಾಸ್ತ್ರ ಇಲಾಖೆಯಲ್ಲಿ ಮಂಜೂರಾದ  ಒಟ್ಟು 503 ಹುದ್ದೆಗಳಲ್ಲಿ 231 ಹುದ್ದೆಗಳು ಭರ್ತಿಯಾಗಿದ್ದು ಉಳಿದ 272 ಹುದ್ದೆಗಳು ಖಾಲಿ ಇವೆ. ಇಲಾಖೆಯು ವ್ಯಾಪಾರ, ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಗಳಲ್ಲಿ ಉಪಯೋಗಿಸುವ ತೂಕ, ಅಳತೆ, ತೂಕದ ಸಾಧನೆ ಹಾಗೂ ಅಳತೆ ಸಾಧನಗಳ ನಿಖರತೆ ಪರಿಶೀಲಿಸಿ ನಿಯಮಾನುಸಾರ ಸತ್ಯಾಪನೆ ಮತ್ತು ಮುದ್ರೆ ಕಾರ್ಯ ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
 
ಇಲಾಖೆಯ ಕಾರ್ಯಚಟುವಟಿಕೆಗಳನ್ನು ಏಪ್ರಿಲ್ 2015ರಿಂದ ಇ-ಮಾಪನ್ ತಂತ್ರಾಂಶದ ಮೂಲಕ ಗಣಕೀಕರಣಗೊಳಿಸಿಕೊಂಡು ನಿರ್ವಹಿಸಲಾಗುತ್ತಿದೆ.
ಮಾರುಕಟ್ಟೆಗಳಲ್ಲಿ ಪೊಟ್ಟಣ ರೂಪದಲ್ಲಿ ಮಾರಾಟವಾಗುವ ವಸ್ತುಗಳ ಮೇಲೆ ಗ್ರಾಹಕರ ಮಾಹಿತಿಗಾಗಿ ಮುದ್ರಿಸಬೇಕಾಗಿರುವ ಅಗತ್ಯ ಘೋಷಣೆಗಳಾದ ತಯಾರಕರ ವಿಳಾಸ, ನಿವ್ವಳ ತೂಕ, ತಯಾರಾದ ದಿನಾಂಕ, ತಿಂಗಳು, ವರ್ಷ, ಗರಿಷ್ಠ ಮಾರಾಟ ಬೆಲೆ, ಗ್ರಾಹಕರ ಸಂಪರ್ಕ ವಿವರಗಳನ್ನು ನಿಯಮಾನುಸಾರ ನಮೂದಿಸಿರುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.
 
ಪೆಟ್ರೋಲ್ ಬಂಕುಗಳಲ್ಲಿ ಗ್ರಾಹಕರುಗಳು ಖರೀದಿಸುವ ಇಂಧನವು ಅವರು ನೀಡುವ ದರಕ್ಕೆ ಸರಿಯಾದ ಪ್ರಮಾಣದಲ್ಲಿ ವಿತರಣೆ ಆಗುವುದನ್ನು ಪರಿಶೀಲಿಸಿ ಮುದ್ರೆ ಮಾಡಲಾಗುತ್ತಿದೆ.ರಾಜ್ಯದಲ್ಲಿರುವ ಕೈಗಾರಿಕೋದ್ಯಮಗಳು ಹಾಗೂ ಸಕ್ಕರೆ ಕಾರ್ಖಾನೆ ಮುಂತಾದ ಕಡೆಗಳಲ್ಲಿ ಉಪಯೋಗಿಸುವ ವೇಬ್ರಿಡ್ಜ್‌ಗಳ ಪರಿಶೀಲನೆ ನೆಡೆಸಿ ಮುದ್ರೆ ಮಾಡಿ ಅವುಗಳ ನಿಖರತೆಯನ್ನು ಕಾಪಾಡಲಾಗುತ್ತಿದೆ ಎಂದಿದ್ದಾರೆ.
 
ಇಲಾಖೆಯು ತನ್ನ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾ ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಮೊಕದ್ದಮೆ ದಾಖಲಿಸುವ ಮೂಲಕ ಕ್ರಮ ಜರುಗಿಸುತ್ತದೆ. ವ್ಯಾಪಾರ, ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಗಳಲ್ಲಿ ಉಪಯೋಗಿಸುವ ತೂಕ, ಅಳತೆ, ತೂಕದ ಸಾಧನ ಹಾಗೂ ಅಳತೆ ಸಾಧನಗಳ ನಿಖರತೆ ಪರಿಶೀಲಿಸಿ ನಿಯಮಾನುಸಾರ ಸತ್ಯಾಪನೆ ಮತ್ತು ಮುದ್ರೆ ಕಾರ್ಯ, ತಪಾಸಣೆ ಮಾಡಿ ದಿ ಲೀಗಲ್ ಮೆಟ್ರಾಲಜಿ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸಿರುವವರ ವಿರುದ್ಧ ನಿಯಮಮಾನುಸಾರ ಕ್ರಮ ಜರುಗಿಸುವುದು ಹಾಗೂ ತೂಕ ಅಳತೆಗಳ ಎಲ್ಲಾ ಲೈಸನ್ಸ್ ಶುಲ್ಕ ಒಳಗೊಂಡಂತೆ ಪ್ರಸಕ್ತ ಸಾಲಿನಲ್ಲಿ ಇಲಾಖೆಯಿಂದ ರೂ. 100 ಕೋಟಿ ರೂ ಸಂಪನ್ಮೂಲವನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಂ ಮಹಿಳೆಗೆ ಡ್ರಾಪ್ ; ಯುವಕನಿಗೆ ಹಲ್ಲೆ ..ಜನರಲ್ಲಿ ಭಯ ಮೂಡಿಸಲು ಕೃತ್ಯ!!