Select Your Language

Notifications

webdunia
webdunia
webdunia
webdunia

ಶಾಲೆಗೆ ಮಗುವನ್ನು ದಾಖಲಿಸಲು ಬಂದ ಮಹಿಳೆಯಿಂದಲೇ ಬಾಡಿ ಮಸಾಜ್​- ಆಯುಕ್ತ ಆದೇಶ

ಶಾಲೆಗೆ ಮಗುವನ್ನು ದಾಖಲಿಸಲು ಬಂದ ಮಹಿಳೆಯಿಂದಲೇ ಬಾಡಿ ಮಸಾಜ್​- ಆಯುಕ್ತ ಆದೇಶ
bangalore , ಬುಧವಾರ, 22 ಸೆಪ್ಟಂಬರ್ 2021 (21:19 IST)
ಬೆಂಗಳೂರು: ಶಾಲೆಗೆ ಮಕ್ಕಳನ್ನು ದಾಖಲಿಸಲು ಬಂದ ಪೋಷಕರ ಜೊತೆಯಲ್ಲಿ ಮುಖ್ಯ ಶಿಕ್ಷಕ ಅನುಚಿತವಾಗಿ ವರ್ತಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. 
 
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೋದಂಡರಾಮಪುರದ ಮುಖ್ಯ ಶಿಕ್ಷಕ ಲೋಕೇಶಪ್ಪ ಶಾಲೆಯಲ್ಲಿ ಬಾಡಿ ಮಸಾಜ್ ಮಾಡಿಸಿಕೊಂಡಿರುವ ಘಟನೆ ಇದಾಗಿದೆ. 
 
ಶಾಲೆಗೆ ಮಗುವನ್ನು ದಾಖಲಿಸಲು ಬಂದ ಪೋಷಕ ಮಹಿಳೆಯರಿಂದ ಒತ್ತಾಯ ಪೂರ್ವಕವಾಗಿ ಈ ಕೃತ್ಯ ನಡೆಸುತ್ತಾನೆ ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕ್ರಮಕ್ಕೆ ಮುಂದಾಗಿರುವ ಬಿಬಿಎಂಪಿ ವಿಶೇಷ ಆಯುಕ್ತ ಅಮಾನತು ಗೊಲಿಸಿ ಆದೇಶ ಹೊರಡಿಸಲಾಗಿದೆ.
 
ಪ್ರಕರಣದ ಪೂರ್ಣ ಪಾಠ: 
 
ಬಿಬಿಎಂಪಿಯ ಕೋದಂಡರಾಮಪುರ ಮುಖ್ಯ ಶಿಕ್ಷಕ ಲೋಕೇಶಪ್ಪ ಶಾಲೆಯ ಕಟ್ಟಡದಲ್ಲಿ ತಮ್ಮ ಅನುಚಿತ ವರ್ತನೆ ಮಗುವಿನ ದಾಖಲಾತಿಗೆ ಬಂದಿದ್ದ ಮಹಿಳೆಯಿಂದ ಬಾಡಿ ಮಸಾಜ್ ಮಾಡಿಸಿಕೊಂಡಿದ್ದಾರೆ. ಶಾಲೆಯ ಆವರಣದಲ್ಲಿಯೇ ಈ ರೀತಿ ಅಕ್ರಮ ಚಟುವಟಿಕೆ ನಡೆಸಿದರೆ ಈತನ ಕಾಮ ಚೇಷ್ಟೆಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗುತ್ತಿವೆ. 
 
 
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಬಿಬಿಎಂಪಿ ಮುಖ್ಯ ಶಿಕ್ಷಕನಿಗೆ ನೋಟಿಸ್ ಜಾರಿ ಮಾಡಿತ್ತು. ಈ ಸಂಭಂಧ ವಿಚಾರಣೆ ನೆಡೆಸಲಾಗಿ ಮುಖ್ಯ ಶಿಕ್ಷಕ ತಾನು ವಿದ್ಯಾರ್ಥಿಯೊಂದಿಗೆ ಬಂದಿದ್ದ ಮಹಿಳೆಯರಿಂದ ಬಾಡಿ ಮಸಾಜ್ ಮಾಡಿಸಿಕೊಂಡಿದ್ದನ್ನು ಖುದ್ದು ಒಪ್ಪಿಕೊಂಡಿದ್ದಾನೆ.
 
 ಸರ್ಕಾರಿ ಶಾಲೆಯ ಕಟ್ಟಡದಲ್ಲಿ ಅದರ ಕೆಲಸದಲ್ಲಿ ಈ ರೀತಿ ತನ್ನ ಕಾಮ ಪುರಾಣ ನಡೆಸುತ್ತಿರುವ ಮುಖ್ಯ ಶಿಕ್ಷಕನ ವಿರುದ್ಧ ಈಗ ಪಾಲಿಕೆ ಕ್ರಮ ಜರುಗಿಸಿದೆ. ಅಗತ್ಯವಿರುವ ಶಿಕ್ಷಕ ಕೂಡ ತಪ್ಪು ಒಪ್ಪಿಕೊಂಡ ಹಿನ್ನಲೆಯಲ್ಲಿ ತಕ್ಷಣ ಜಾರಿಗೆ ಬರುವಂತೆ ಸೇವೆಯಿಂದ ಅಮಾನತು ಮಾಡಿ ಶಿಕ್ಷಣ ವಿಭಾಗದ ವಿಶೇಷ ಆಯುಕ್ತ ರೆಡ್ಡಿ ಶಂಕರ್ ಬಾಬು ಆದೇಶ ಹೊರಡಿಸಲಾಗಿದೆ.
ಶಾಲೆ

Share this Story:

Follow Webdunia kannada

ಮುಂದಿನ ಸುದ್ದಿ

ಅಸುರಕ್ಷತಾ ಕಟ್ಟಡ ಮಾರ್ಪಾಡು ತಡೆಗಟ್ಟಲು ಬಿಬಿಎಂಪಿ ಸುತ್ತೋಲೆ