Select Your Language

Notifications

webdunia
webdunia
webdunia
webdunia

ಖಾಸಗಿ ಶಾಲಾ ಸಂಘಟನೆಯಿಂದ ಇಂದು ಫ್ರೀಡಂ ಪಾರ್ಕ್ ನಲ್ಲಿ ಧರಣಿ

ಖಾಸಗಿ ಶಾಲಾ ಸಂಘಟನೆಯಿಂದ ಇಂದು ಫ್ರೀಡಂ ಪಾರ್ಕ್ ನಲ್ಲಿ  ಧರಣಿ
bangalore , ಬುಧವಾರ, 22 ಸೆಪ್ಟಂಬರ್ 2021 (20:54 IST)
ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ  ತ್ಯಾಗ್ರಹ ನಡೆಸಿದ್ರು ನಮ್ಮ ಕನ್ನಡ ಶಾಲೆ ಉಳಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ಖಾಸಗಿ ಶಾಲೆಗಳು ಪ್ರತಿಭಟನೆ ನಡೆಸಿದ್ರು.ಯಾದಗಿರಿ, ಕಲಬುರ್ಗಿ, ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ ಜಿಲ್ಲೆಗಳಿಂದ ಆಗಮಿಸಿದ ಶಿಕ್ಷಕರು ಈ ಭಾಗದಲ್ಲಿನ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳನ್ನ ಉಳಿಸಿ, ಬೆಳೆಸಿ ಎಂದು ಒತ್ತಾಯಿಸಿದ್ರು. ಅಷ್ಟೇ ಅಲ್ಲದೇ ಈ ಭಾಗದಲ್ಲಿ ಶಾಲೆ ತೆರೆಯಲು ಸರ್ಕಾರವೇ ಹಿಂದೇಟು ಹಾಕಿದೆ.ಇಂತಹುದರಲ್ಲಿ ನಾವು ಈ ಭಾಗದ ವಿದ್ಯಾರ್ಥಿಗಳಿಗೆ ಶಾಲೆ ನಡೆಸುತ್ತಿದ್ದೇವೆ.ಹೀಗಿರುವಾಗ ಈ ಶಾಲೆಗಳನ್ನ ಉಳಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ.1995 ರ ನಂತರ ದಲ್ಲಿ ಪ್ರಾರಂಭವದ ಕನ್ನಡ ಶಾಲೆಗಳನ್ನ ಅನುದಾನಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಿದ್ರು. ‌ಇನ್ನೂ  ಬೇಡಿಕೆಯನ್ನ ಸರ್ಕಾರ ಈಡೇರಿಸಲೇಬೇಕು ಎಂದು  ಸಂಘಟನೆಗಳು ಪಟ್ಟು ಹಿಡಿದ್ರು. ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ರು

Share this Story:

Follow Webdunia kannada

ಮುಂದಿನ ಸುದ್ದಿ

ಗೀತಾ ಗೋವಿಂದಂ ಸಿನಿಮಾ ಮಾದರಿಯ ಕಿಸ್ ಪ್ರಕರಣ: ಆರೋಪಿಯನ್ನು ಬಂಧಿಸಿದ ನಗರ ಪೊಲೀಸರು