Select Your Language

Notifications

webdunia
webdunia
webdunia
webdunia

ಗೀತಾ ಗೋವಿಂದಂ ಸಿನಿಮಾ ಮಾದರಿಯ ಕಿಸ್ ಪ್ರಕರಣ: ಆರೋಪಿಯನ್ನು ಬಂಧಿಸಿದ ನಗರ ಪೊಲೀಸರು

ಗೀತಾ ಗೋವಿಂದಂ ಸಿನಿಮಾ ಮಾದರಿಯ ಕಿಸ್ ಪ್ರಕರಣ: ಆರೋಪಿಯನ್ನು ಬಂಧಿಸಿದ ನಗರ ಪೊಲೀಸರು
bangalore , ಬುಧವಾರ, 22 ಸೆಪ್ಟಂಬರ್ 2021 (20:38 IST)
ಬೆಂಗಳೂರು: ತೆಲಗು ನಟ ವಿಜಯದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ಗೀತಾ ಗೋವಿಂದಂ ಸಿನಿಮಾ ಮಾದರಿಯಲ್ಲಿ ಕೆ.ಎಸ್‍.ಆರ್.ಟಿ  ಬಸ್‍ನಲ್ಲಿ ಯುವತಿಗೆ ಮುತ್ತು ಕೊಟ್ಟು ಪರಾರಿಯಾಗಿದ್ದವನನ್ನು ನಗರದ ಬಾಗಲಗುಂಟೆ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. 
 
ಬಳ್ಳಾರಿ ಮೂಲದ ಮಧುಸೂದನ್‍ರೆಡ್ಡಿ (25) ಬಂಧಿತ. ಈತ  ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ವಿಜಯನಗರದಲ್ಲಿ ನೆಲೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
 
ಪ್ರತಿಷ್ಠಿತ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬಳ್ಳಾರಿಗೆ ಹೋಗಿದ್ದಳು. ಸೆಪ್ಟೆಂಬರ್ 12ರ ರಾತ್ರಿ ಬಳ್ಳಾರಿಯಿಂದ ಕೆ.ಎಸ್‍.ಆರ್.ಟಿ.ಸಿ  ಬಸ್‍ನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಳು . ಅಪರಿಚಿತ ಯುವಕ ಪಕ್ಕದಲ್ಲೇ ಕುಳಿತು ಪ್ರಯಾಣ ಬೆಳೆಸಿದ್ದ. ಬಸ್ ಹೊರಟ ಕೆಲ ಸಮಯದ ನಂತರ ಯುವತಿ ನಿದ್ದೆಗೆ ಜಾರಿದ್ದಳು. 
 
ಸೆಪ್ಟೆಂಬರ್ 13ರ ಬೆಳಗಿನ ಜಾವ ಟಿ ದಾಸರಹಳ್ಳಿ ಬಳಿ ಬಸ್ ಬಂದಾಗ ಆರೋಪಿ ಮಲಗಿದ್ದ ಯುವತಿ ಕೆನ್ನೆಗೆ ಚುಂಬಿಸಿದ್ದ. ಇದರಿಂದ ಎಚ್ಚರಗೊಂಡ ಯುವತಿ ಮುತ್ತುಕೊಟ್ಟವರು ಯಾರು ಎಂದು ನೋಡವಷ್ಟರಲ್ಲೇ ಯುವಕ ಬಸ್‍ನಿಂದ ಇಳಿದು ಪರಾರಿಯಾಗಿದ್ದ.
 
ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸರು ತನಿಖೆ ಕೈಗೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು. ಬಳ್ಳಾರಿ ಬಸ್ ನಿಲ್ದಾಣದಲ್ಲಿ ಬಸ್‍ಗೆ ಯಾರೆಲ್ಲ ಹತ್ತಿದ್ದರು ಎಂಬುದರ ಬಗ್ಗೆ ಸಿಸಿ ಕ್ಯಾಮರಾ ಮತ್ತು ಬಸ್ ಟಿಕೆಟ್ ಪರಿಶೀಲನೆ ನಡೆಸಿದಾಗ ಆರೋಪಿಯ ಮುಖಚಹರೆ ಪತ್ತೆಯಾಗಿತ್ತು. ಯುವತಿ ಸಹ ಗುರುತು ಹಿಡಿದಿದ್ದಳು  ಈ ಆಧಾರದ ಮೇಲೆ ಬೆನ್ನತ್ತಿದ್ದಾಗ ವಿಜಯನಗರದಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ವಿಕ್ಟೋರಿಯಾ ಆಸ್ಪತ್ರೆಯಲ್ಲೇ ಕೊರೊನಾ ಸ್ಪೋಟ