Select Your Language

Notifications

webdunia
webdunia
webdunia
webdunia

ಸೈಟ್ ಮಾರಾಟ ಮಾಡಿಕೊಡೋದಾಗಿ ನಂಬಿಸಿ ನಿವೃತ್ತ ಪೊಲೀಸ್ ಅಧಿಕಾರಿಗೆ ವಂಚಿಸಿರೋ ಪ್ರಕರಣ

ಸೈಟ್ ಮಾರಾಟ ಮಾಡಿಕೊಡೋದಾಗಿ ನಂಬಿಸಿ ನಿವೃತ್ತ ಪೊಲೀಸ್ ಅಧಿಕಾರಿಗೆ ವಂಚಿಸಿರೋ ಪ್ರಕರಣ
bangalore , ಭಾನುವಾರ, 19 ಸೆಪ್ಟಂಬರ್ 2021 (16:08 IST)
ಸೈಟ್ ಮಾರಾಟ ಮಾಡಿಕೊಡೋದಾಗಿ ನಂಬಿಸಿ ನಿವೃತ್ತ ಪೊಲೀಸ್ ಅಧಿಕಾರಿಗೆ ವಂಚಿಸಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಿರ್ಮಾಣ್ ಶೆಲ್ಟರ್ಸ್ ಕಂಪನಿಯ ಎಂಡಿ ಲಕ್ಷ್ಮಿನಾರಾಯಣ್ ಹಾಗೂ ಶಶಿ ಪಾಟೀಲ್ ಎಂಬುವರಿಂದ ವಂಚನೆ ನಡೆದಿದೆ. ಆನೇಕಲ್ ತಾಲ್ಲೂಕಿನ ಜಿಗಣಿ ಸಮೀಪದ ರಾಜಪುರದಲ್ಲಿ ಎಸಿಪಿ ಲವಕುಮಾರ್ ರವರಿಗೆ ಸೇರಿದ ಮೂರು ಸೈಟ್ ಗಳನ್ನ ಮಾರಾಟಕ್ಕೆ ಇಟ್ಟಿದ್ರು. ಈ ಬಗ್ಗೆ ಮಾಹಿತಿ ಪಡೆದು ಲಕ್ಷ್ಮಿ ನಾರಾಯಣ ಹಾಗೂ ಶಸಿಪಾಟೀಲ್ ಸೈಟ್ ಗಳನ್ನ ಸೇಲ್ ಮಾಡಿಕೊಡೋದಾಗಿ ಭೇಟಿ ಮಾಡಿದ್ರು. ಬಳಿಕ ಲವಕುಮಾರ್ ರಿಂದ ಪವರ್ ಆಫ್ ಆಟಾರ್ನಿ ಮೂಲಕ ಸೈಟ್ ದಾಖಲೆಗಳನ್ನ ಪಡೆದು ಸೈಟ್ ಗಳನ್ನ 85 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಆದ್ರೆ, ಕೇವಲ 30  ಲಕ್ಷ ರೂಪಾಯಿಗಳನ್ನ ನಿವೃತ್ತ ಪೊಲೀಸ್ ಅಧಿಕಾರಿ ಲವಕುಮಾರ್ ಅವ್ರ ಖಾತೆಗೆ ಡೆಪಾಸಿಟ್ ಮಾಡಿರೋ ಆರೋಪಿಗಳು ಉಳಿದ ಹಣ ನೀಡದೇ ಎಸ್ಕೇಪ್ ಆಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಿವೃತ್ತ ಎಸಿಪಿ ಲವಕುಮಾರ್ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸ್ರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

20ಕ್ಕೆ ಸಿಇಟಿ ಫಲಿತಾಂಶ ಪ್ರಕಟ