Select Your Language

Notifications

webdunia
webdunia
webdunia
webdunia

ಹಸುವಿಗಾಗಿ ಹೇಗೆ ಹಸಿರು ಕ್ರಾಂತಿ ಮಾಡಲಾಗಿತ್ತೋ ಈಗ ಪೌಷ್ಟಿಕಾಂಶದ ಕೊರತೆ

ಹಸುವಿಗಾಗಿ ಹೇಗೆ ಹಸಿರು ಕ್ರಾಂತಿ ಮಾಡಲಾಗಿತ್ತೋ ಈಗ ಪೌಷ್ಟಿಕಾಂಶದ ಕೊರತೆ
bangalore , ಶನಿವಾರ, 18 ಸೆಪ್ಟಂಬರ್ 2021 (21:08 IST)
ಬೆಂಗಳೂರು: ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ ಕುಲಪತಿ ರಾಜೇಂದ್ರ ಪ್ರಸಾದ್ ಈ ಟಿವಿ ಭಾರತದ ಜೊತೆ ಮಾತನಾಡಿದ 2023 ವರ್ಷವನ್ನು ಅಂತಾರಾಷ್ಟ್ರೀಯ ಸಿರಿ ಧಾನ್ಯಗಳ ದಿನಾಚರಣೆ ಎಂದು ಘೋಷಿಸಲಾಗಿದೆ. ರಾಜ್ಯದಲ್ಲಿ ಸಿರಿ ಧಾನ್ಯಗಳ ಪ್ರಾಮುಖ್ಯತೆ ತುಂಬಾ ಇದೆ, ಅದರಲ್ಲೂ ಒಣ ಭೂಮಿಯಲ್ಲಿ ಮಿಲ್ಲೆಟ್ ಗಳನ್ನೂ ಬೆಳೆಯುತ್ತಿದೆ. ಪೌಷ್ಟಿಕಾಂಶ ಯುಕ್ತ ಧಾನ್ಯವಾಗಿವೆ. ಈ ಹಿಂದೆ ರಾಷ್ಟ್ರದಲ್ಲಿ ಹಸಿರು ಆಹಾರ ಪ್ರಮಾಣವನ್ನು ಹೆಚ್ಚಿಸಲಾಗಿತ್ತೋ, ಈಗ ಪೌಷ್ಟಿಕಾಂಶದ ಕೊರತೆಯನ್ನು ಸಮರೋಪಾದಿಯಲ್ಲಿ ನೀಗಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.   
 
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಅಂತಾರಾಷ್ಟ್ರೀಯ ಸಿರಿ ಧಾನ್ಯಗಳ 2023 ವರ್ಷದ ಪ್ರಯುಕ್ತ ವಿಚಾರ ಸಂಕೀರ್ಣದ ಉದ್ಘಾಟನಾ ಸಮಾರಂಭ ಶುಕ್ರವಾರ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಆವರಣದಲ್ಲಿರುವ ಕುವೆಂಪು ಸಭಾಂಗಣದಲ್ಲಿ ಜರುಗಿತು. 
 
ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯದ ರಾಜ್ಯ ಸಚಿವರ ಕೈಲಾಶ್ ಚೌಧರಿ ವರ್ಚುಯಲ್ ಪ್ಲಾಟ್ಫಾರ್ಮ್ ಮೂಲಕ ಅಧ್ಯಕ್ಷತೆ ವಹಿಸಲಾಗಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ ಎಸ್ ರಾಜೇಂದ್ರ ಪ್ರಸಾದ್ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಮುಖ್ಯ ಅತಿಥಿಗಳಾಗಿ ಶಿಕ್ಷಣ ನಿರ್ದೇಶಕರಾದ ಡಾ.ಕೆ.ಸಿ.ನಾರಾಯಣಸ್ವಾಮಿ, ವಿಸ್ತರಣಾ ನಿರ್ದೇಶಕರಾದ ಡಾ. ಎನ್. ದೇವಕುಮಾರ್ ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನಾ ನಿರ್ದೇಶಕರು ಡಾ.
 
ಸಿರಿ ಧಾನ್ಯಗಳು ಅತಿ ಹೆಚ್ಚು ಪೌಷ್ಟಿಕಾಂಶ ಉಳ್ಳಾಡಿದ್ದಾಗಿದೆ, ಬೆಳೆಯ ಪ್ರಮಾಣವನ್ನು ಹೆಚ್ಚಿಸುವಲ್ಲಿ ಪ್ರಮುಖ ನಿಟ್ಟಿನಲ್ಲಿ  ಹೆಜ್ಜೆ ಇಡಲಾಗುತ್ತಿದೆ. 2023 ಸಿರಿ ಧಾನ್ಯಗಳ ವರ್ಷದ ಘೋಷಣೆಗೆ ತಕ್ಕಂತೆ ನಾವು ಇವತ್ತಿನಿಂದ ಕಾರ್ಯಕ್ರಮಗಳನ್ನು  ಪ್ರಾರಂಭಿಸಲಿದ್ದೇವೆ. ಸಿರಿ ಧಾನ್ಯಗಳನ್ನು ಯಾವ ರೀತಿ ಪ್ರೋತ್ಸಾಹಿಸಬಹುದು, ಬೇರೆ ವಿಧವಾದ ಬಳಕೆ, ಬೆಳೆಗಳ ಪ್ರಮಾಣ ಹೆಚ್ಚಿಸುವ ದೃಷ್ಟಿಯಲ್ಲಿ ಮತ್ತು ಲಾಭ ಗಳಿಸುವ ನಿಟ್ಟಿನಲ್ಲಿ, ಸಾಮಾನ್ಯ ಮನುಷ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು. 
 
ಈ ಕಾರ್ಯಕ್ರಮದಲ್ಲಿ ಸಿರಿ ಧಾನ್ಯಗಳನ್ನು ಬಳಕೆ, ಪೋಷಕಾಂಶಗಳ ಬಗೆಗಿನ ವಿಚಾರ ಸಂಕಿರಣ ಹಮ್ಮಿಕೊಂಡಿದ್ದೇವೆ, ಜೊತೆಗೆ ಪ್ರತಿ ತಿಂಗಳು ಒಂದೊಂದು ಸಿರಿ ಧಾನ್ಯದ ಬಗ್ಗೆ ಮತ್ತು ಅವುಗಲ್ಲಿ ಯಾವ ರೀತಿ ಬೇರೆ ತರಹದ ವಸ್ತುಗಳನ್ನು ತಯಾರಿಸಬಹುದು. ಬೆಳದಂತಹ ವ್ಯಕ್ತಿ ಕೂಡ ಯಾವ ರೀತಿ ಯಶಸ್ವೀ ವ್ಯಾಪಾರಸ್ಥನನ್ನಾಗಿ ಮಾಡಬಹುದು ಎನ್ನುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. 
 
2022 ಜನವರಿ ತಿಂಗಳಲ್ಲಿ ರಾಗಿ ಬೆಳಗಳ ಬಗೆಗೆ ವಿಚಾರ ಸಂಕೀರ್ಣ:  
 
ಜನವರಿ ತಿಂಗಳಲ್ಲಿ ರಾಗಿ ಬೆಳೆಯ ಬಗ್ಗೆ ಬೃಹತ್ ವಿಚಾರ ಸಂಕೀರ್ಣವನ್ನು ಕೂಡ ಹಮ್ಮಿಕೊಂಡಿದ್ದೇವೆ, ರಾಗಿ ಲಕ್ಷ್ಮಣಯ್ಯ  ನವರ ಹೆಸರು ಈ ಕ್ಷೇತ್ರದಲ್ಲಿ ಜನ ಜನಿತವಾಗಿದೆ. ಅವರನ್ನು ನಾವು ರಾಗಿ ಬ್ರಹ್ಮ ಎಂದೂ ಕರೆಯುತ್ತೇವೆ. ಮಂಡ್ಯದ ವಿಶ್ವವಿದ್ಯಾನಿಯಾಲಯದ  ಫಾರಂ ನಲ್ಲಿ ಪೂರ್ಣವಾಗಿ ರಾಗಿ ಬೆಳೆಗಳನ್ನು  ಬಳಸಿ ವಿನೂತನ ತಳಿಗಳನ್ನು ತರುವ ನಿಟ್ಟಿನಲ್ಲಿ ಲಕ್ಮಯ್ಯ ನವರ ಪಾತ್ರ ಪ್ರಮುಖವಾಗಿದೆ. ಈ ಹಿನ್ನಲೆಯಲ್ಲಿ ರಾಗಿ ಬೆಳೆಗಳಲ್ಲಿ ಹಿಂದಿನ  ಬೆಳವಗಣಿಗಳ ಜೊತೆಗೆ ನಮ್ಮ  ಕೆ.ಎಂ.ಆರ್ (ಕರ್ನಾಟಕ ಮಂಡ್ಯ ರಾಗಿ) ತಳಿಗಳನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು 
 
ರಾಗಿ ಸೇರಿದಂತೆ, ಸಿರಿ ಧಾನ್ಯಗಳನ್ನು ಹೇಗೆ ಒಂದು ದೊಡ್ಡ ಕಾರ್ಖಾನೆಗಳ ರೂಪದಲ್ಲಿ, ಇತರ ಆಹಾರ ಉತ್ಪನ್ನಗಳನ್ನು ಹೇಗೆ  ಪ್ರಚುರಪಡಿಸಬಹುದು ಎನ್ನುವ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ ಮತ್ತು 2023 ವರೆಗೆ ಪ್ರತಿ ತಿಂಗಳು ಕಾರ್ಯಕ್ರಮಗಳನ್ನು ನೆಡೆಸಲಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬ ಸಹ  ಆಚರಿಸಲಾಗುತ್ತಿದ್ದು , ಈ ಸಂದರ್ಭದಲ್ಲಿ ಶುಭಾಶಯಗಳನ್ನು ಕೋರುತ್ತಾ ಈ ಉದ್ಘಾಟನಾ ವಿಚಾರ ಸಂಕೀರ್ಣವನ್ನು ಹಮ್ಮಿಕೊಂಡಿದ್ದೇವೆ ಎಂದೂ ಹೇಳಿದರು. 
 
ಗ್ರಾಹಕರು ಬೆಲೆ ಹೆಚ್ಚಳಕ್ಕೆ ಸಿರಿ ಧಾನ್ಯಗಳನ್ನು ಕೊಳ್ಳಲು ಹಿಂಜರಿಯುತ್ತಿರುವ ನಮ್ಮ  ವರದಿಗಾರರ  ಪ್ರೆಶ್ನೆಗೆ ಎಲ್ಲಾ ರೈತರು ಬೆಳೆದಂತಹ ಬೆಳೆಗಳನ್ನು ರೈತರಿಗೆ ಕೆ.ಜಿ ಗೆ 30 ರಿಂದ 40 ರೂ ಮಾತ್ರ ದೊರೆಯುತ್ತಿದೆ. ಆದರೆ ಗ್ರಾಹಕರಿಗೆ 150 ರಿಂದ 170 ರೂ ವರೆಗೆ ಮಾರಾಟವಾಗುತ್ತಿದೆ. ಅದಕ್ಕೆ ಉತ್ಪಾದನಾ ವೆಚ್ಚ, ನಿರ್ವಹಣಾ ವೆಚ್ಚಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹೆಚ್ಚು ಗಮನ ಕೊಡಲು ಮುಂದಾಗುತ್ತಿದ್ದೇವೆ. ಬೆಳೆಗಳನ್ನು ಬೆಳೆಯುವ ಜಾಗದ ಹತ್ತಿರದಲ್ಲೇ ನಿರ್ವಹಣಾ ಪ್ರಕ್ರಿಯೆಗಳನ್ನು ಕೈಗೊಳ್ಳುವ  ವ್ಯವಸ್ಥೆ ಮಾಡಿದ್ದೇವೆ.10 ಜಿಲ್ಲೆಗಳ ನಾಲ್ಕು ಕೃಷಿ ವಿಶ್ಯಾವಿದ್ಯಾಲಯಗಳ ಕೃಷಿ ವಿಜ್ಞಾನ  ಮತ್ತು ಸಂಶೋಧನಾ ಕೇಂದ್ರಗಳಲ್ಲಿ ಯಂತ್ರೋಪಕರಣಗಳನ್ನು ಸ್ಥಾಪಿಸಿದ್ದೇವೆ. ಈ ನಿಟ್ಟಿನಲ್ಲಿ ರೈತರಿಗೆ ಹಲವು ರೀತಿಯಲ್ಲಿ ಸಹಕಾರ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 
ರೈತರು ಮತ್ತು ವ್ಯಾಪಾರಿಗಳ ಸಹಕಾರ ಸಂಘಗಳ ಮೂಲಕ ಜಾಗೃತಿ ಕಾರ್ಯಕ್ರಮಗಳ ಮೂಲಕ ಎಲ್ಲೆಲ್ಲಿ ಸಿರಿ ಧಾನ್ಯಗಳನ್ನು ಬೆಳೆಯಲಾಗುತ್ತದೋ ಅಲ್ಲಿ ಹೆಚ್ಚು ಕಾರ್ಯನ್ಮುಕವಾಗಲು ಪ್ರಯತ್ನಿಸುತ್ತಿದ್ದಾರೆ, ಈ ಬಳಕೆದಾರರು, ಗ್ರಾಹಕರಿಗೆ ಅತಿ ಕಡಿಮೆ ದರಗಳನ್ನು ತಲುಪಲು ಯತ್ನಿಸುತ್ತಿದ್ದಾರೆ. ನಮ್ಮ ಕೃಷಿ ಪರೀಕ್ಷಾ ಕೇಂದ್ರಗಳನ್ನು ಹೊಂದಬಹುದು, ಇಂಜಿನಿಯರಿಂಗ್ ವಿಭಾಗವು ಐದು ತಿಂಗಳ ಗ್ರಾಹಕರಿಗೆ ಕಡಿಮೆ ದರದಲ್ಲಿ ಸಿರಿ ಧಾನ್ಯಗಳನ್ನು ಲಭ್ಯವಾಗುವಂತೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಲಾಗಿದೆ.       
ಮಾಜಿ

Share this Story:

Follow Webdunia kannada

ಮುಂದಿನ ಸುದ್ದಿ

10 ಕೋಟಿ ರೂ ವೆಚ್ಚದ ಶಿಲ್ಪಕಲಾ ಕೇಂದ್ರ: ಸಚಿವ ಸುನಿಲ್ ಕುಮಾರ್