Select Your Language

Notifications

webdunia
webdunia
webdunia
webdunia

ಹಣ ಕಟ್ಟದ ಮಹಿಳೆಗೆ ರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿತ

ಹಣ ಕಟ್ಟದ ಮಹಿಳೆಗೆ ರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿತ
ತುಮಕೂರು , ಬುಧವಾರ, 23 ಜನವರಿ 2019 (16:47 IST)
ಹಣ ಕಟ್ಟದ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿ ಆ ಬಳಿಕ ಅಮಾನವೀಯವಾಗಿ ವರ್ತಿಸಿರುವ ಘಟನೆ ನಡೆದಿದೆ.

ಹಣ ಕಟ್ಟದ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿ ಬೀದಿಯಲ್ಲಿ ಸದಸ್ಯೆಯರು ಎಳೆದಾಡಿದ್ದಾರೆ. ಮಹಿಳಾ ಸಂಘದಲ್ಲಿ ಹಣ ಪಡೆದಿದ್ದ ಮಹಿಳೆ ಸಮಯಕ್ಕೆ ಸರಿಯಾಗಿ ಹಣ ಮರುಪಾವತಿ ಮಾಡಿಲ್ಲವೆಂದು ಸಂಘದ ಇತರೆ ಮಹಿಳಾ ಸದಸ್ಯೆಯರು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಆ ಬಳಿಕ ಬೀದಿಯಲ್ಲಿ ಎಳೆದಾಡಿ ಅಮಾನವೀಯವಾಗಿ ವರ್ತಿಸಿದ್ದಾರೆ. ಈ ಘಟನೆ ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದಲ್ಲಿ ನಡೆದಿದೆ. ಸವಿತಾ ಎಂಬ ಮಹಿಳೆ ಮೇಲೆ ಹಲ್ಲೆ ನಡೆಸಲಾಗಿದೆ.

ಕಾಲಲ್ಲಿ ಒದ್ದು ಕಿರುಚಾಡಿದರೂ ಬಿಡದೇ ನಡು ಬೀದಿಯಲ್ಲಿ ಎಳೆದೊಯ್ದು ಅಮಾನವೀಯವಾಗಿ ಇತರೆ ಸದಸ್ಯೆಯರು ವರ್ತಿಸಿದ್ದಾರೆ. ಸವಿತಾರನ್ನ ಎಳೆ ದೊಯ್ಯುವಾಗ ಬೀದಿ ನಾಯಿಯೊಂದು ಕಚ್ಚಲು ಪ್ರಯತ್ನಿಸುತ್ತಿದ್ದು, ನೋಡುತ್ತಾ ನಿಂತ ಸಾರ್ವಜನಿಕರು ಮಹಿಳೆಯ ಸಹಾಯಕ್ಕೆ ಬರದೆ  ಮಾನವೀಯತೆಯನ್ನೇ ಮರೆತಂತೆ ವರ್ತಿಸಿದ್ದಾರೆ. 

ಗುಬ್ಬಿ ಪಟ್ಟಣದ ಮಡಿವಾಳ ಬೀದಿಯ ನಿವಾಸಿ ಸವಿತಾಳನ್ನ ಆಕೆಯ ಗಂಡ ತೊರೆದು ಹೋಗಿದ್ದು ಈಕೆ ಮನೆಗೆಲಸ ಮಾಡಿಕೊಂಡು ತನ್ನ ಮಗುವನ್ನ ಸಾಕಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ಪಟ್ಟಣದ ಎಸ್ ಕೆಎಸ್ ಮಹಿಳಾ ಸಂಘದಲ್ಲಿ ಕಳೆದ ಕೆಲ ದಿನಗಳ ಹಿಂದೆ 25 ಸಾವಿರ ಹಣ ಸಾಲ ಪಡೆದು ಈಗಾಗಲೇ ಹತ್ತು ಸಾವಿರ ಮರುಪಾವತಿ ಮಾಡಿದ್ದಾರೆ.

ಉಳಿದ ಹಣ ನೀಡಲು ಸತಾಯಿಸುತ್ತಿದ್ದಾರೆಂದು ಆರೋಪಿಸಿ ಸಂಘದ ಸದಸ್ಯೆಯರಾದ ಜಯಮ್ಮ, ಸಾಕಮ್ಮ ಎಂಬುವರು ನಡುಬೀದಿಯಲ್ಲೆ ಈ ಕೃತ್ಯ ಎಸಗಿದ್ದಾರೆ. ದೌರ್ಜನ್ಯ ಎಸಗಿದ ಮಹಿಳೆಯರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದಗಂಗಾ ಶ್ರೀಗೆ ನಮಿಸಿದ ನಾಗರಹಾವು: ಶಾಕಿಂಗ್!