Select Your Language

Notifications

webdunia
webdunia
webdunia
webdunia

ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನ ಚಳಿ ಬಿಡಿಸಿದ ಮಹಿಳೆ

ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನ ಚಳಿ ಬಿಡಿಸಿದ ಮಹಿಳೆ
ಬೆಂಗಳೂರು , ಮಂಗಳವಾರ, 22 ಜನವರಿ 2019 (09:01 IST)
ಬೆಂಗಳೂರು : ಮನೆಗೆ ನುಗ್ಗಿ ಅತ್ಯಾಚಾರ ಮಾಡಲು ಪ್ರಯತ್ನಿಸಿದ ಕಾಮುಕನಿಗೆ ಮಹಿಳೆಯೊಬ್ಬಳು ಸುತ್ತಿಗೆಯಿಂದ ಹೊಡೆದು ತಕ್ಕ ಶಾಸ್ತಿ ಮಾಡಿದ  ಘಟನೆ ಎಚ್.ಎ.ಎಲ್. ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನಪ್ಪನಹಳ್ಳಿಯಲ್ಲಿ ನಡೆದಿದೆ.


ಆರೋಪಿಯ ಹೆಸರು ಅರುಣ್ ಎಂಬುದಾಗಿ ತಿಳಿದುಬಂದಿದೆ. ಸಂತ್ರಸ್ತ ಮಹಿಳೆ ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದು, ಕೆಲಸ ಮುಗಿಸಿ ಸಂಜೆ ಮನೆಗೆ ಬಂದು ಬಟ್ಟೆ ಬದಲಿಸುವ ವೇಳೆ ಬಾಗಿಲು ಮುರಿದು ಒಳಗೆ ಬಂದ ಕಾಮುಕ ಪಿಸ್ತೂಲ್ ತೋರಿಸಿ ಮಹಿಳೆಯನ್ನು ಹೆದರಿಸಿ ಆಕೆಯ ಮೇಲೆರಗಿ ಲೈಂಗಿಕ ದೌರ್ಜನ್ಯ ಎಸಗಲು ಶುರು ಮಾಡಿದ. ಆ ವೇಳೆ ಆತನಿಂದ ತಪ್ಪಿಸಿಕೊಳ್ಳಲು  ಒದ್ದಾಡುತ್ತಿದ್ದ ಮಹಿಳೆಯ ಕೈಗೆ ಸುತ್ತಿಗೆಯೊಂದು  ಸಿಕ್ಕಿದೆ. ಅದರಿಂದ ಆಕೆ ಕಾಮುಕನಿಗೆ ಹೊಡೆದು ಆತನ ಹೆಸರು ಅರುಣ್ ಎಂಬುದಾಗಿ ಬಾಯಿಬಿಡಿಸಿದ್ದಾಳೆ. ಆದರೆ ಸ್ಥಳಕ್ಕೆ ಅಕ್ಕಪಕ್ಕದವರು ಬರುವುದರೊಳಗೆ ಆತ ಅಲ್ಲಿಂದ ಪರಾರಿಯಾಗಿದ್ದಾನೆ.


ಈ ಘಟನೆಗೆ ಸಂಬಂಧಸಿದಂತೆ ಮಹಿಳೆ ಆರೋಪಿಯ ವಿರುದ್ಧ ಎಚ್.ಎ.ಎಲ್. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ದೂರಿನ್ವಯ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

12 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ಕೊಲೆ ಮಾಡಿದ ದುಷ್ಕರ್ಮಿಗಳು