Select Your Language

Notifications

webdunia
webdunia
webdunia
webdunia

10 ರೂ. ನೋಟಿನ ಕಟ್ಟನ್ನು ಬೀಳಿಸಿ ಲ್ಯಾಪ್ ಟಾಪ್ ಎಗರಿಸುವ ಕಳ್ಳರ ಗ್ಯಾಂಗ್ ಇದೆ ಎಚ್ಚರಿಕೆ

10 ರೂ. ನೋಟಿನ ಕಟ್ಟನ್ನು ಬೀಳಿಸಿ ಲ್ಯಾಪ್ ಟಾಪ್ ಎಗರಿಸುವ ಕಳ್ಳರ ಗ್ಯಾಂಗ್ ಇದೆ ಎಚ್ಚರಿಕೆ
ಬೆಂಗಳೂರು , ಮಂಗಳವಾರ, 22 ಜನವರಿ 2019 (08:53 IST)
ಬೆಂಗಳೂರು : 10 ರೂಪಾಯಿ ನೋಟನ್ನು ಕೆಳಗೆ ಬೀಳಿಸುವ ನೆಪದಲ್ಲಿ ಕಳ್ಳರ ಗ್ಯಾಂಗ್ ವೊಂದು ವ್ಯಕ್ತಿಯೊಬ್ಬರ ಲ್ಯಾಪ್ ಟಾಪ್ ಎಗರಿಸಿದ ಘಟನೆ ಜಯನಗರದ  9ನೇ ಬ್ಲಾಕ್ ನಲ್ಲಿ ನಡೆದಿದೆ.


ರಾಜೇಶ್‌ ಲ್ಯಾಪ್‌ಟಾಪ್‌ ಕಳೆದುಕೊಂಡ ವ್ಯಕ್ತಿ. ಇವರು 9ನೇ ಬ್ಲಾಕ್‌ ನ ಮಾರ್ಕೆಟ್‌ ನಲ್ಲಿರುವ ಹೂವಿನ ಅಂಗಡಿ ಎದುರಿಗೆ ಕಾರು ನಿಲ್ಲಿಸಿ, ಹೂಗುಚ್ಛ ಖರೀದಿಸಿ ವಾಪಸ್‌ ಬಂದು ಕಾರು ಹತ್ತುವ ವೇಳೆ ವ್ಯಕ್ತಿಗೆ ತಿಳಿಯದಂತೆ ಕಳ್ಳನೊಬ್ಬ 10 ರೂ. ಮುಖಬೆಲೆಯ ನೋಟಿನ ಕಟ್ಟುನ್ನು ಕೆಳಗೆ ಬೀಳಿಸಿ 'ಸರ್‌ ನಿಮ್ಮ ಹಣ ಕೆಳಗೆ ಬಿದ್ದಿದೆ' ಎಂದು ಹೇಳಿದ್ದಾನೆ. ಆಗ ರಾಜೇಶ್‌ ಅದನ್ನು ಎತ್ತಿಕೊಳ್ಳಲು ಕೆಳಗೆ ಬಗ್ಗುತ್ತಿದ್ದಂತೆ ಮತ್ತೊಬ್ಬ ಬಂದು ಮುಂಬದಿ ಸೀಟಿನಲ್ಲಿ ಇಟ್ಟಿದ್ದ ಲ್ಯಾಪ್‌ ಟಾಪ್‌ ನ್ನು  ಬ್ಯಾಗ್ ಸಹಿತ ಎತ್ತಿಕೊಂಡು ಪರಾರಿಯಾಗಿದ್ದಾನೆ.


ತಕ್ಷಣ ರಾಜೇಶ್‌ ಜಯನಗರ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಕಳ್ಳರು ಕದ್ದದ್ದ ಬ್ಯಾಗ್‌ ಜಯನಗರದ ಬಿಗ್‌ ಬಜಾರ್‌ ಬಳಿ ಅದೇ ದಿನ ಪತ್ತೆಯಾಗಿದೆ. ಬ್ಯಾಗ್‌ನೊಳಗಿದ್ದ ಎಟಿಎಂ ಕಾರ್ಡ್‌ ಗಳೆಲ್ಲಾ ಅದರಲ್ಲೇ ಇದ್ದವು. ಆದರೆ ಲ್ಯಾಪ್‌ಟಾಪ್‌ ಮಾತ್ರ ಕಳ್ಳತನವಾಗಿದೆ. ಬಿಗ್‌ ಬಜಾರ್‌ ಸಮೀಪ ಇರುವ ಸಿಸಿಟಿವಿಗಳ ನೆರವಿನಿಂದ ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಸಾಹಿತ್ಯ ಸಂಭ್ರಮದಲ್ಲಿ ಗದ್ದಲ, ಗಲಾಟೆ!