ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ 7ನೇ ಸಾಹಿತ್ಯ ಸಂಭ್ರಮದಲ್ಲಿ ಸೈನಿಕರನ್ನು ರೇಪಿಸ್ಟ್ ಗಳೆಂದ ಕಾರಣಕ್ಕಾಗಿ ವಾಗ್ವಾದ ನಡೆದಿದೆ.
ಆರ್ ಎಸ್ ಎಸ್ ಕಾರ್ಯಕರ್ತರು ಗಣವೇಷದಲ್ಲಿಯೇ ನುಗ್ಗಿ ಮೈಕ್ ಹಾಗೂ ಟೇಬಲ್ ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಹಿತ್ಯ ಸಂಭ್ರಮದಲ್ಲಿ ದಲಿತ ಬಂಡಾಯ ಸಾಹಿತಿ ಲಕ್ಷ್ಮಣ ಗಾಯಕವಾಡ ಗೋ ಮೂತ್ರ ಕುಡಿಯುವ ಬದಲಿಗೆ ಹಂದಿ ಹಾಗೂ ಕತ್ತಿ ಮೂತ್ರ ಕುಡಿಯಿರಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದನ್ನು ಹಾಗೂ ಬುದ್ದಿಜೀವಿ ಡಾ. ಶಿವವಿಶ್ವನಾಥ್, ಭಾರತದ ಗಡಿ ಕಾಯುವ ಸೈನಿಕರು ರೇಪಿಸ್ಟ್ ಗಳು ಎಂದು ಹೇಳಿಕೆ ನೀಡಿದ್ದನ್ನು ಖಂಡಿಸಲಾಗಿದೆ. ಏಕಾಏಕಿ ವೇದಿಕೆ ಏರಿದ ಸ್ವಯಂ ಸೇವಕರು, ದೇಶ ಕಾಯುವ ಸೈನಿಕರೆಂದರೆ ಏನೆಂದು ತಿಳಿದ್ದಿದ್ದೀರಾ, ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಿರಿ ಎನ್ನುತ್ತಲೇ ದೇಶದ ರಕ್ಷಣೆಯಲ್ಲಿ ನಿರತ ಸೈನಿಕರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಾಹಿತಿಗಳ ವಿರುದ್ದ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಸಂಭ್ರಮದಲ್ಲಿ ಕೆಲಕಾಲ ಆತಂಕವುಂಟಾಯಿತು.