Select Your Language

Notifications

webdunia
webdunia
webdunia
webdunia

ಆಸ್ತಿ ಖರೀದಿಗೆ 20 ಸಾವಿರಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸುವ ಮುನ್ನ ಎಚ್ಚರ. ಯಾಕೆ ಗೊತ್ತಾ?

webdunia
ನವದೆಹಲಿ , ಮಂಗಳವಾರ, 22 ಜನವರಿ 2019 (09:08 IST)
ನವದೆಹಲಿ : ಆಸ್ತಿ ಖರೀದಿಗೆ 20 ಸಾವಿರಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸಿದವರ  ವಿರುದ್ಧ ದೆಹಲಿಯ ತೆರಿಗೆ ಇಲಾಖೆ ಅಧಿಕಾರಿಗಳು ನೊಟೀಸ್ ಜಾರಿ ಮಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.


ಆಸ್ತಿಗಳ ಖರೀದಿಗೆ ಕಪ್ಪುಹಣ ಬಳಕೆಯಾಗುತ್ತಿರುವ ಹಿನ್ನಲೆಯಲ್ಲಿ ಇದನ್ನು ತಡೆಯಲು ಆದಾಯ ತೆರಿಗೆ ಇಲಾಖೆ ನಗದು ವಹಿವಾಟಿಗೆ ಮಿತಿ ವಿಧಿಸಿದೆ. ಆದಕಾರಣ ತೆರಿಗೆ ಇಲಾಖೆಯವರು ಆಸ್ತಿ ಖರೀದಿಗೆ 20 ಸಾವಿರಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸಿದವರ ಮಾಹಿತಿ ಕಲೆ ಹಾಕುತ್ತಿದ್ದು,  2015-2018 ರಲ್ಲಿ ನಡೆದ ಆಸ್ತಿ ನೋಂದಣಿದಾರರ ಮಾಹಿತಿಯನ್ನು ದೆಹಲಿಯ 21 ಉಪ ರಿಜಿಸ್ಟ್ರಾರ್ ಕಚೇರಿಯಿಂದ ಪಡೆಯುತ್ತಿದ್ದಾರೆ.


ಜೂನ್ 1, 2015 ರಲ್ಲಿ ಜಾರಿಗೆ ಬಂದ ಹೊಸ ನಿಯಮದ ಪ್ರಕಾರ, ಕೃಷಿ ಭೂಮಿ ಸೇರಿದಂತೆ ಯಾವುದೇ ಆಸ್ತಿ ಖರೀದಿ ಚೆಕ್, RTGS ಮತ್ತು NEFT ಮೂಲಕವೇ ನಡೆಯಬೇಕು. ಹಾಗೇ  20 ಸಾವಿರದೊಳಗೆ ವ್ಯವಹಾರ ಮಾಡಬೇಕು. ಅದಕ್ಕಿಂತ ಹೆಚ್ಚು ನಗದು ವಹಿವಾಟು ನಡೆದರೆ ತೆರಿಗೆ ಇಲಾಖೆ ಅಗತ್ಯ ಕ್ರಮಕೈಗೊಳ್ಳಲಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ; ಕಂಪ್ಲಿ ಶಾಸಕ ಗಣೇಶ್ ಕಾಂಗ್ರೆಸ್ ಪಕ್ಷದಿಂದ ಅಮಾನತು