Select Your Language

Notifications

webdunia
webdunia
webdunia
webdunia

ತಹಸೀಲ್ದಾರ್, ಎಸಿ ಕಚೇರಿಗೆ ಆರ್ ಸಿ ದಿಢೀರ್ ಭೇಟಿ ; ಹಿರಿಯ ಅಧಿಕಾರಿಗಳ ಪಾಡು ಹೀಗಾಯ್ತು

ತಹಸೀಲ್ದಾರ್, ಎಸಿ ಕಚೇರಿಗೆ ಆರ್ ಸಿ ದಿಢೀರ್  ಭೇಟಿ ; ಹಿರಿಯ ಅಧಿಕಾರಿಗಳ ಪಾಡು ಹೀಗಾಯ್ತು
ಕಲಬುರಗಿ , ಶನಿವಾರ, 7 ಡಿಸೆಂಬರ್ 2019 (18:55 IST)
ತಹಸೀಲ್ದಾರ್ ಹಾಗೂ ಎಸಿ ಕಚೇರಿಗೆ ದಿಢೀರ್ ಭೇಟಿ ನೀಡಿದ ಪ್ರಾದೇಶಿಕ ಆಯುಕ್ತರು ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.

ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ್, ಕಲಬುರಗಿ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿ ಬಾಕಿಯಿರುವ ಕಡತ ಹಾಗೂ ವಿಷಯ ನಿರ್ವಾಹಕರ ಸಂಕಲನಗಳನ್ನು  ತಪಾಸಣೆ ನಡೆಸಿ ಒಂದು ಮತ್ತು ಎರಡು ವರ್ಷಗಳಿಗೆ ಮೇಲ್ಪಟ್ಟು ಬಾಕಿಯಿರುವ ಕಡತಗಳನ್ನು ತುರ್ತಾಗಿ ವಿಲೆವಾರಿ ಮಾಡಬೇಕೆಂದು ಸೂಚಿಸಿದ್ರು.

ಸಾರ್ವಜನಿಕರು ವಿವಿಧ ರೀತಿಯ ಕೆಲಸಕ್ಕಾಗಿ ಕಚೇರಿಗೆ ಆಗಮಿಸಿ ಅರ್ಜಿ ಸಲ್ಲಿಸಿದಾಗ ನಿಗದಿತ ಅವಧಿಯೊಳಗೆ ಕ್ರಮವಹಿಸಬೇಕು. ಸಕಾಲದಡಿಯಲ್ಲಿ ಸ್ವೀಕೃತವಾಗುವ ಎಲ್ಲಾ ಅರ್ಜಿಗಳನ್ನು ತುರ್ತಾಗಿ ವಿಲೇವಾರಿಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಕಲಬುರಗಿ ಸಹಾಯಕ ಆಯುಕ್ತರ ಕಚೇರಿಗೆ ಭೇಟಿ ನೀಡಿ, ಸಿಬ್ಬಂದಿಗಳು ಕಾರ್ಯನಿರ್ವಹಿಸುವ ವಿವಿಧ ಸಂಕಲನಗಳ ಮಾಹಿತಿ ಪಡೆದರು.

ಸಹಾಯಕ ಆಯುಕ್ತರ ಕಚೇರಿಯಲ್ಲಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುವ ಗ್ರಾಮ ಲೆಕ್ಕಾಧಿಕಾರಿಗಳ ನಿಯೋಜನೆಯನ್ನು ತಕ್ಷಣವೇ ರದ್ದುಪಡಿಸಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವಂತೆ ಕ್ರಮವಹಿಸಬೇಕು. ಕಚೇರಿಯಲ್ಲಿ ಬಾಕಿಯಿರುವ ನ್ಯಾಯಾಲಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೇಲಿಂದ ಮೇಲೆ ವಿಚಾರಣೆ ಕೈಗೊಂಡು ತ್ವರಿತವಾಗಿ ವಿಲೆವಾರಿಗೊಳಿಸಲು ಸೂಚಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಮಗಳಿಗೆ ಅನ್ಯಾಯವಾದಾಗ ಬಾರದ ಮಾನವ ಹಕ್ಕು ಸಂಘಟನೆಗಳು ಈಗ್ಯಾಕೆ ಬಂದರು? ದಿಶಾ ಪೋಷಕರ ಆಕ್ರೋಶ