Select Your Language

Notifications

webdunia
webdunia
webdunia
webdunia

ಆರ್ ಸಿಇಪಿ ಒಪ್ಪಂದದಿಂದ ಹಿಂದೆ ಸರಿದ ಕೇಂದ್ರ ಸರ್ಕಾರ

webdunia
ಮಂಗಳವಾರ, 5 ನವೆಂಬರ್ 2019 (07:04 IST)
ಬ್ಯಾಂಕಾಕ್ : ದೇಶದ ಹೈನುಗಾರರಲ್ಲಿ ಆತಂಕ ಮೂಡಿಸಿದ್ದ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ(ಆರ್ ಸಿಇಪಿ) ಒಪ್ಪಂದದಿಂದ ಕೇಂದ್ರ ಸರ್ಕಾರ ಹಿಂದೆ ಸರಿದಿದೆ.
ಥಾಯ್ಲೆಂಡಿನ ಬ್ಯಾಂಕಾಕ್ ನಲ್ಲಿ ನಡೆದ ಏಷಿಯನ್ ರಾಷ್ಟ್ರಗಳ ಶೃಂಗಸಭೆಯಲ್ಲಿ  15 ರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿಗೆ ನೀಡಿದ್ದು, 2020ರ ಶೃಂಗಸಭೆಯಲ್ಲಿ ಇದಕ್ಕೆ ಸಹ ಹಾಕಲಿವೆ ಎನ್ನಲಾಗಿದೆ. ಆದರೆ ಪ್ರಧಾನಿ ಮೋದಿ ಅವರು ಈ ಒಪ್ಪಂದಕ್ಕೆ ಸಹಿ ಹಾಕದಿರಲು ನಿರ್ಧರಿಸಿದ್ದಾರೆ.


ಈ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ದೇಶದ ಹಿತಾಸಕ್ತಿಗಳನ್ನು ಬಲಿಕೊಡುವ ಯಾವುದೇ ಕೆಲಸವನ್ನು ಮಾಡಲ್ಲ. ನನ್ನ ಆತ್ಮಸಾಕ್ಷಿಯೂ ಇದಕ್ಕೆ ಅನುಮತಿಸುವುದಿಲ್ಲ.  ಆರ್ ಸಿಇಪಿ ಬಗ್ಗೆ ಭಾರತೀಯರಿಂದ ನನಗೆ ಯಾವುದೇ ಧನಾತ್ಮಕ ಉತ್ತರ ಸಿಗದ ಕಾರಣ ಈ ಒಪ್ಪಂದದಿಂದ ಹಿಂದೆ ಸರಿದಿರುವುದಾಗಿ ಹೇಳಿದ್ದಾರೆ.


Share this Story:

Follow Webdunia Hindi

ಮುಂದಿನ ಸುದ್ದಿ

ವೈದ್ಯರ ಪ್ರತಿಭಟನೆಯ ಹಿನ್ನಲೆ; ರಾಜ್ಯಾದ್ಯಂತ ಓಪಿಡಿ ಸೇವೆ ಬಂದ್