Publish Date: Tue, 19 Nov 2019 (18:45 IST)
Updated Date: Tue, 19 Nov 2019 (18:46 IST)
ತಹಸೀಲ್ದಾರ್ ಹಾಗೂ ಪಿಎಸ್ ಐ ವೊಬ್ಬರು ಜೊತೆಯಾಗಿ ಸೇರಿಕೊಂಡು ಮಾಡಿರೋ ಕೆಲಸ ಇದಾಗಿದೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೋನಾಪುರ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಭಾರೀ ಪ್ರಮಾಣದ ಅಕ್ರಮ ಪಡಿತರ ಅಕ್ಕಿಯನ್ನು ರಾಂಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪಡಿತರ ಅಕ್ಕಿ ಹಾಗೂ ಶಾಲಾ ಬಿಸಿಯೂಟದ ಅಕ್ಕಿ ಅಕ್ರಮವಾಗಿ ಸಂಗ್ರಹ ಮಾಡಿದ್ದ ಗೋಡಾನ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ 60 ಟನ್ ನಷ್ಟು ಅಕ್ರಮವಾಗಿ ಸಂಗ್ರಹಿಸಿದ್ದ ಅಕ್ಕಿ ವಶಕ್ಕೆ ಪಡೆದಿದ್ದಾರೆ.
ಮೊಳಕಾಲ್ಮೂರು ತಹಸೀಲ್ದಾರ್ ಬಸವರಾಜ್ ಹಾಗೂ ಪಿಎಸ್ಐ ಗುಡ್ಡಪ್ಪ ನೇತೃತ್ವದಲ್ಲಿ ದಾಳಿ ನಡೆದಿದೆ. ಆರೋಪಿಗಳಾದ ಚಿದಾನಂದಪ್ಪ, ಸಣ್ಣ ಮಾರಣ್ಣ ಸೇರಿ ಐವರ ವಿರುದ್ಧ ಕೇಸ್ ದಾಖಲಿಸಲಾಗಿದೆ.
ರಾಂಪೂರದಿಂದ ಬೆಂಗಳೂರು ಕಡೆಗೆ ಅಕ್ರಮವಾಗಿ ಅಕ್ಕಿ ಸಾಗಾಟದ ಶಂಕೆ ವ್ಯಕ್ತಪಡಿಸಿದ್ದು, ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.