Select Your Language

Notifications

webdunia
webdunia
webdunia
webdunia

ಟ್ವೀಟ್ ಮಾಡಿ ಅಪಹಾಸ್ಯಕ್ಕೀಡಾದ ಆರ್ ಸಿಬಿ

ಟ್ವೀಟ್ ಮಾಡಿ ಅಪಹಾಸ್ಯಕ್ಕೀಡಾದ ಆರ್ ಸಿಬಿ
ಬೆಂಗಳೂರು , ಬುಧವಾರ, 4 ಡಿಸೆಂಬರ್ 2019 (09:31 IST)
ಬೆಂಗಳೂರು: ಐಪಿಎಲ್ ನಲ್ಲಿ ಇದುವರೆಗೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದೇ ಇದ್ದರೂ ಭರ್ಜರಿ ಟ್ವೀಟ್ ಮಾಡಿ ಕೊಚ್ಚಿಕೊಂಡಿದ್ದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಪಹಾಸ್ಯಕ್ಕೀಡಾಗಿದೆ.


ಅಷ್ಟಕ್ಕೂ ಆರ್ ಸಿಬಿ ಮಾಡಿದ ಟ್ವೀಟ್ ಏನು ಗೊತ್ತಾ? ಚಂದ್ರನಲ್ಲಿಗೆ ಇಳಿದಿದ್ದ ವಿಕ್ರಮ್ ಲ್ಯಾಂಡರ್ ಪತ್ತೆಯಾಯಿತು. ಎಬಿಡಿ ವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಹೊಡೆದ ಚೆಂಡು ಎಲ್ಲಿ ಹೋಯಿತು ಎಂದು ಪತ್ತೆ ಮಾಡುವಿರಾ? ಎಂದು ಆರ್ ಸಿಬಿ ಅಭಿಮಾನಿಗಳಿಗೆ ಟ್ವೀಟ್ ಮೂಲಕ ಪ್ರಶ್ನೆ ಮಾಡಿತ್ತು.

ಇದಕ್ಕೆ ಅಭಿಮಾನಿಗಳು ಆರ್ ಸಿಬಿಯನ್ನು ಹಿಗ್ಗಾ ಮುಗ್ಗಾ ಟ್ರೋಲ್ ಮಾಡಿದ್ದಾರೆ. ಇದುವರೆಗೆ ಐಪಿಎಲ್ ನಲ್ಲಿ ಟ್ರೋಫಿ ಗೆಲ್ಲುವುದು ಬಿಡಿ, ಒಂದೇ ಆವೃತ್ತಿಯಲ್ಲೂ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಅಂತಹದ್ದರಲ್ಲಿ ಇಂತಹ ಟ್ವೀಟ್ ಎಂದು ಗೇಲಿ ಮಾಡಿದ್ದಾರೆ. ಮೊದಲು ನೀವು ಐಪಿಎಲ್ ಟ್ರೋಫಿ ಹುಡುಕಿ. ಎಬಿಡಿ, ಕೊಹ್ಲಿ ಹೊಡೆದ ಚೆಂಡು ಪತ್ತೆ ಮಾಡುವ ಬದಲು ಮೊದಲು ನಾಸಾದಿಂದ ಪಂದ್ಯ ಗೆಲ್ಲಲು ಸಹಾಯ ಕೇಳಿ ಎಂದು ಲೇವಡಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಮಗೆ ಕೊಕ್ ಕೊಡುವ ನಿರ್ಧಾರದಿಂದ ಬೇಸರವಿಲ್ಲ ಎಂದ ಬಿಸಿಸಿಐ ಆಯ್ಕೆ ಸಮಿತಿ ಎಂಎಸ್ ಕೆ ಪ್ರಸಾದ್