Select Your Language

Notifications

webdunia
webdunia
webdunia
webdunia

ನಿರ್ಮಾಣ ಆದ ಒಂದೇ ತಿಂಗಳಿಗೆ ಬಿರುಕು ಬಿಟ್ಟ ರಾಪಿಡ್ ರೋಡ್

ನಿರ್ಮಾಣ ಆದ ಒಂದೇ ತಿಂಗಳಿಗೆ ಬಿರುಕು ಬಿಟ್ಟ ರಾಪಿಡ್ ರೋಡ್
bangalore , ಶನಿವಾರ, 7 ಜನವರಿ 2023 (14:16 IST)
ಹಳೆ ಮದ್ರಾಸ್ ರಸ್ತೆಯಲ್ಲಿ ನಿರ್ಮಿಸಲಾಗಿರುವ ರಾಪಿಡ್ ರೋಡ್ ಬಿರುಕುಬಿಟ್ಟಿದ್ದು ಇದಕ್ಕೆ ಸಂಬಂಧಪಟ್ಟಂತೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿದ್ದಾರೆ.ಕೋಟಿ ವೆಚ್ಚದಲ್ಲಿ ಶರವೇಗದಲ್ಲಿ ನಿರ್ಮಾಣ ಆದ ರಸ್ತೆ ಮಿಂಚಿನ ವೇಗದಲ್ಲಿ ದುರಸ್ತಿಗೆ ಒಳಗಾಗಿದೆ.
 
ಹೊಸ ತಂತ್ರಜ್ಞಾನದ ನೆಪದಲ್ಲಿ ಕಳಪೆ ಕಾಮಗಾರಿ ಆಗಿದ್ಯಾ ಅನ್ನುವ ಶಂಕೆ ವ್ಯಕ್ತವಾಗಿದೆ.ದೇಶದ ಪ್ರಥಮ ರಾಪಿಡ್ ರಸ್ತೆ ಅಂತ ಬಿಬಿಎಂಪಿ ಬಿಂಬಿಸಿತ್ತು.ಆದ್ರೆ ಈಗ ರಸ್ತೆಯಲ್ಲಿ ಬಿರುಕುಬಿದ್ದಿದೆ.ರಸ್ತೆ ರೆಡಿಯಾಗಿದ್ದೂ ಬೇಗವಾದ್ರು ಸಿಎಂ ಉದ್ಘಾಟನೆಗೆ ಒಂದಷ್ಟು ದಿನ ಕಾಯಬೇಕಾದ ಪರಿಸ್ಥಿತಿಯಿತ್ತು .ಆದ್ರೆ ಸಿಎಂ ಬೊಮ್ಮಾಯಿಯಿಂದ  ಉದ್ಘಾಟನಾ ಭಾಗ್ಯ ಸಿಕ್ಕರೂ ಕಳಪೆ ಕಾಮಗಾರಿಯಿಂದ ಮತ್ತೆ ವಾಹನ ಸವಾರರು ಪರದಾಡಯವಂತಾಗಿದೆ.337.5 ಮೀಟರ್‌ ರಸ್ತೆಯನ್ನು ಪ್ರೀಕಾಸ್ಟ್‌ ಪೋಸ್ಟ್‌ ಟೆನ್ಷನಿಂಗ್‌ ಪೇವ್‌ಮೆಂಟ್‌ ತಂತ್ರಜ್ಞಾನದ ಮೂಲಕ ನಿರ್ಮಾಣ ಮಾಡಲಾಗಿತ್ತು.ಪ್ರಾಯೋಗಿಕವಾಗಿ ನಿರ್ಮಿಸಲಾಗಿರುವ ಈ ರ್ಯಾಪಿಡ್ ರಸ್ತೆ ಮೂರ್ನಾಲ್ಕು ಕಡೆ ಬಿರುಕುಬಿದ್ದಿದೆ.ಪ್ರೀಕಾಸ್ಟ್‌ ಪ್ಯಾನೆಲ್‌ ನಿರ್ಮಾಣದಲ್ಲಿ ಗುಣಮಟ್ಟದ ಸಿಮೆಂಟ್‌ ಮಿಶ್ರಣ ಇಲ್ಲದ್ದೇ ಇದಕ್ಕೆ ಕಾರಣ ಅನ್ನೋ ಆರೋಪ ಕೇಳಿಬಂದಿದೆ. ಕ್ಷಿಪ್ರವಾಗಿ ರಸ್ತೆ ನಿರ್ಮಾಣವಾಗಿದೆ ಎಂದು ಸಂತಸದಲ್ಲಿದ್ದ ನಾಗರಿಕರು ಕಳಪೆ ಕಾಮಗಾರಿ ಕಂಡು ನಿಗಿ ನಿಗಿ  ಕೆಂಡಕಾರುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ 3 ದಿನಗಳ ಕಾಲ ಐತಿಹಾಸಿಕ ಬೀದರ್ ಉತ್ಸವ