Select Your Language

Notifications

webdunia
webdunia
webdunia
webdunia

3 ದಿನಗಳ ಕಾಲ ಐತಿಹಾಸಿಕ ಬೀದರ್ ಉತ್ಸವ

3 ದಿನಗಳ ಕಾಲ ಐತಿಹಾಸಿಕ ಬೀದರ್ ಉತ್ಸವ
ಬೀದರ್ , ಭಾನುವಾರ, 8 ಜನವರಿ 2023 (10:07 IST)
ಬೀದರ್ : ದಶಕದ ಬಳಿಕ ಇಂದಿನಿಂದ ಮೂರು ದಿನಗಳ ಕಾಲ ಗಡಿ ಜಿಲ್ಲೆ ಬೀದರ್ ನಲ್ಲಿ ಐತಿಹಾಸಿಕ ಬೀದರ್ ಉತ್ಸವ ನಡೆಯಲಿದೆ. ಈ ಉತ್ಸವಕ್ಕೆ ಐತಿಹಾಸಿಕ ಬೀದರ್ ಕೋಟೆ ಸಾಕ್ಷಿಯಾಗಲಿದೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಸೇರಿದಂತೆ ಖ್ಯಾತ ನಟರು ಹಾಗೂ ವಿಜಯ್ ಪ್ರಕಾಶ್, ಮಂಗಲಿ, ಅನುರಾಧಾ ಭಟ್, ಕುಮಾರಸಾನು, ಸಾಬರಿ ಬ್ರದರ್ಸ್ ಸೇರಿದಂತೆ ಖ್ಯಾತ ಗಾಯಕರು ಮೂರು ದಿನಗಳ ಕಾಲ ಸಂಗೀತ ಸಂಜೆಯ ರಸಮಂಜರಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಐತಿಹಾಸಿಕ ಕೋಟೆಯಲ್ಲಿ 20 ಸಾವಿರಕ್ಕೂ ಅಧಿಕ ಆಸನದ ವ್ಯವಸ್ಥೆ ಮಾಡಲಾಗಿದ್ದು, ಬೀದರ್ ಉತ್ಸವದಲ್ಲಿ ಸುಮಾರು ಪ್ರತಿದಿನ 50 ಸಾವಿರ ಜನ್ರು ಸೇರುವ ನಿರೀಕ್ಷೆ ಇದೆ. ಜೊತೆಗೆ ಬೋಟಿಂಗ್ ಉತ್ಸವ, ಸಿಡಿಮದ್ದು ಉತ್ಸವ, ಗಾಳಿಪಟ ಉತ್ಸವ, ಹೆಲಿಕ್ಯಾಪ್ಟರ್ ಸಂಚಾರ ಉತ್ಸವ ಸೇರಿದಂತೆ 20ಕ್ಕೂ ಅಧಿಕ ಉತ್ಸವಗಳು ನಡೆಯಲಿವೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಶೀಘ್ರವೇ ಸಂಪುಟ ವಿಸ್ತರಣೆ : ಸಿಎಂ