Select Your Language

Notifications

webdunia
webdunia
webdunia
webdunia

ಭೀಕರ ಅಫಘಾತದಿಂದ ಕೂಲಿಕಾರ್ಮಿಕ ಮಹಿಳೆಯರು ಸಾವು!

ಭೀಕರ ಅಫಘಾತದಿಂದ ಕೂಲಿಕಾರ್ಮಿಕ ಮಹಿಳೆಯರು ಸಾವು!
ಬೀದರ್ , ಶನಿವಾರ, 5 ನವೆಂಬರ್ 2022 (06:58 IST)
ಬೀದರ್ : ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಟ್ರಕ್ ಹಾಗೂ ಆಟೋ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಮಹಿಳೆಯರು ದಾರುಣವಾಗಿ ಸಾವಿಗೀಡಾದ ಘಟನೆ ಬೀದರ್ನಲ್ಲಿ ನಡೆದಿದೆ.

ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಬೆಮ್ಮಳಖೇಡ ಗ್ರಾಮದ ಬಳಿ ಘಟನೆ ನಡೆದಿದ್ದು, ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಇನ್ನುಳಿದ 6 ಮಂದಿ ಮಹಿಳೆಯರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

ಪ್ರಭಾವತಿ (36), ಯಾದಮ್ಮ (40), ಗುಂಡಮ್ಮ (52), ಜಕ್ಕಮ್ಮ (32) ಹಾಗೂ ರುಕ್ಮಿಣಿ (60) ಮೃತಪಟ್ಟ ಮಹಿಳೆಯರು. ಇದರೊಂದಿಗೆ ಚಿಕಿತ್ಸೆ ಪಡೆಯುತ್ತಿರುವ 6 ಮಂದಿ ಮಹಿಳೆಯರು ಉಡುಬಾಳು ಗ್ರಾಮದವರೇ ಆಗಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ನಿಷ್ಪಕ್ಷಪಾತ ತನಿಖೆ ನಡೆಸಬೇಕು-ಸಿದ್ದರಾಮಯ್ಯ