Select Your Language

Notifications

webdunia
webdunia
webdunia
webdunia

ಪತ್ನಿ ಸಾವಿನ ಸುದ್ದಿ ಕೇಳಿ ಪತಿ ಸಾವು

ಪತ್ನಿ ಸಾವಿನ ಸುದ್ದಿ ಕೇಳಿ ಪತಿ ಸಾವು
ಕೊಪ್ಪಳ , ಗುರುವಾರ, 3 ನವೆಂಬರ್ 2022 (18:28 IST)
ಪತ್ನಿ ಸಾವನ್ನಪ್ಪಿದ ಸುದ್ದಿ ಕೇಳಿ ಪತಿಗೆ ಹೃದಯಾಘಾತವಾದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮದಲಗಟ್ಟಿ ಗ್ರಾಮದಲ್ಲಿ ನಡೆದಿದೆ. ಶಿವಪ್ಪ ತಳವಾರ್​​ರ ಪತ್ನಿ ಹೊನ್ನಮ್ಮ ಅನಾರೋಗ್ಯದಿಂದ ಸಾವನ್ನಪ್ಪಿದ್ರು. ಪತ್ನಿ ಸಾವಿನ ಸುದ್ದಿ ತಿಳಿದ ಶಿವಪ್ಪಗೆ ಹೃದಯಾಘಾತವಾಗಿದೆ. ಪತ್ನಿ ಸಾವನ್ನಪ್ಪಿದ ಮೂರು ಗಂಟೆಯಲ್ಲಿಯೇ ಪತಿಯು ಸಾವನಪ್ಪಿದ್ದು, ಸಂಬಂಧಿಕರು ಕಂಬನಿ ಮಿಡಿದಿದ್ದಾರೆ. ಸತಿ-ಪತಿಗಳು ಬಹಳ ಅನ್ಯೋನ್ಯದಿಂದ ಜೀವನ ಸಾಗಿಸ್ತಿದ್ರು. ಪತಿ, ಪತ್ನಿಯ ಅಂತ್ಯಸಂಸ್ಕಾರವನ್ನು ಜೊತೆಯಲ್ಲಿಯೇ ಮಾಡಲು ಸಂಬಂಧಿಕರು ತೀರ್ಮಾನ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರ’ ಮೆಚ್ಚಿದ ನಿರ್ಮಲಾ ಸೀತಾರಾಮನ್