Select Your Language

Notifications

webdunia
webdunia
webdunia
webdunia

ಹಿಂದುಳಿದ ಸಮಾಜಕ್ಕೆ BJP ಅನುಕೂಲ ಮಾಡಿದೆ-ಮಾಜಿ ಸಚಿವ K.S ಈಶ್ವರಪ್ಪ

ಹಿಂದುಳಿದ ಸಮಾಜಕ್ಕೆ BJP ಅನುಕೂಲ ಮಾಡಿದೆ-ಮಾಜಿ ಸಚಿವ K.S ಈಶ್ವರಪ್ಪ
Shivamogga , ಗುರುವಾರ, 3 ನವೆಂಬರ್ 2022 (17:46 IST)
ರಾಜ್ಯದ ವಿಧಾನಸಭಾ ತಯಾರಿ ದೃಷ್ಟಿಯಿಂದ BJP ಹಿಂದುಳಿದ ವರ್ಗದ ಸಮಾವೇಶ ನಡೆಸಿದೆವು.
ಕಲ್ಬುರ್ಗಿ ಸಮಾವೇಶ ಬಹಳ ಶಿಸ್ತಿನಿಂದ ಯಶಸ್ವಿಯಾಯ್ತು. ಕಾಂಗ್ರೆಸ್, JDS ಏನೇ ಸರ್ಕಸ್ ಮಾಡಿದ್ರೂ ಹಿಂದುಳಿದ ಸಮಾಜಕ್ಕೆ ಅತಿ ಹೆಚ್ವು ಅನುಕೂಲ ಆಗಿದ್ದು BJPಯಿಂದ ಎಂದು ಮಾಜಿ ಸಚಿವ K.S ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಆ ಕಾರ್ಯಕ್ರಮ ನೋಡಿ‌ ಕಾಂಗ್ರೆಸ್ JDSನವರಿಗೆ ಆಶ್ಚರ್ಯ ಆಗಿದೆ. ಹಿಂದುಳಿದ ಸಮಾಜಕ್ಕೆ ಈ ಹಿಂದಿನ ಸರ್ಕಾರಗಳು ಯಾವುದೇ ಅನುದಾನ ಕೊಡಲಿಲ್ಲ. ನಮ್ಮ ಸರ್ಕಾರ ಬಂದ ನಂತರ ಹಿಂದುಳಿದ ಸಮಾಜಕ್ಕೆ ಅತಿ ಹೆಚ್ಚು ಅನುದಾನ ಕೊಟ್ಟಿದ್ದೇವೆ ಎಂದು ತಿಳಿಸಿದ್ರು. ನವೆಂಬರ್​​​​ 10 ರಂದು ಬಳ್ಳಾರಿಯಲ್ಲಿ S.T. ಸಮಾವೇಶ ನಡೆಯಲಿದೆ. ದಲಿತರಿಗೆ, ಹಿಂದುಳಿದವರಿಗೆ ಅತಿ ಹೆಚ್ಚಿನ ಅನುಕೂಲ ಮಾಡ್ತಿರೋದು BJP ಎಂದು ತಿಳಿಸಿದ್ರು. ಸಿದ್ದರಾಮಯ್ಯ ವಿರುದ್ದ ಲೋಕಾಯುಕ್ತದಲ್ಲಿ ಪ್ರಕರಣ ದಾಖಲು ಮಾಡಲಾದ ವಿಚಾರ ಕುರಿತು ಮಾತನಾಡಿದ ಅವರು, ಕಾಂಗ್ರೆಸ್​​​ನವರು ನಮ್ಮ ಮೇಲೆ ಕೇವಲ ಆರೋಪ ಮಾಡ್ತಿದ್ದರು. ಆದರೆ ನಾವು ಸಿದ್ದರಾಮಯ್ಯ ಅವರು ಚೆಕ್ ಮುಖಾಂತರ ಲಂಚ ಪಡೆದಿರೋದನ್ನು ದಾಖಲಾತಿ ಸಮೇತ ದೂರು ನೀಡಿದ್ದೇವೆ ಎಂದು ತಿಳಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ರೇಣುಕಾಚಾರ್ಯ ಸಹೋದರ ಪುತ್ರ ಚಂದ್ರಶೇಖರ್​​​​ ನಾಪತ್ತೆ ಕೇಸ್‌ಗೆ ಟ್ವಿಸ್ಟ್‌