Select Your Language

Notifications

webdunia
webdunia
webdunia
webdunia

ಗುಂಪಾಗಿ ರಸ್ತೆದಾಟಿದ ಗಜಪಡೆಗಳು

Yards crossed the road in a group
ಚಾಮರಾಜನಗರ , ಗುರುವಾರ, 3 ನವೆಂಬರ್ 2022 (17:57 IST)
ಚಾಮರಾಜನಗರ ಜಿಲ್ಲೆ ಬಂಡೀಪರದ ಕುಂದುಕೆರೆ ವ್ಯಾಪ್ತಿಯಲ್ಲಿ ಗಜಪಡೆಗಳು ರಸ್ತೆ ದಾಟಿವೆ. ಈ ದೃಶ್ಯ ಪ್ರವಾಸಿಗರ ಮೊಬೈಲ್​ನಲ್ಲಿ ಸೆರೆಯಾಗಿದೆ. ರಸ್ತೆ ದಾಟುತ್ತಿದ್ದ ಗಜಪಡೆಯನ್ನು ಕಂಡು ಪ್ರವಾಸಿಗರು ಬೆರಗಾಗಿದ್ದಾರೆ. ಈ ವಿಡಿಯೋದಲ್ಲಿ ಹತ್ತರಿಂದ ಹದಿನೈದು ಆನೆಗಳು ಒಟ್ಟಾಗಿ ರೋಡ್ ಕ್ರಾಸ್‌ ಮಾಡುವುದನ್ನು ಕಾಣಬಹುದು. ಬಂಡೀಪುರ ಅರಣ್ಯ ಕಚೇರಿಯ ಬಳಿ ಇರುವ ರಸ್ತೆಯನ್ನು, ಗಜಪಡೆ ಕುಟುಂಬ ಸಮೇತವಾಗಿ ಒಂದೆಡೆಯಿಂದ ಮತ್ತೊಂದೆಡೆ ದಾಟುತ್ತಿದೆ. ಮೊದಲಿಗೆ ಹಾಗೂ‌ ಕೊನೆಗೆ ಗುಂಪಿನ ದೊಡ್ಡಾನೆಗಳು ಇದ್ದು, ಮಧ್ಯದಲ್ಲಿ ಮಾರಿಯಾನೆಗಳನ್ನು ಸೇರಿಸಿಕೊಂಡು ರಸ್ತೆ‌ ದಾಟುವ ದೃಶ್ಯ ಎಲ್ಲರ ಮನ ಸೆಳೆದಿದೆ. ಇಷ್ಟು ದೊಡ್ಡ ಆನೆಯ ಹಿಂಡನ್ನು ಕಂಡು ಪ್ರವಾಸಿಗರು ಫುಲ್​ ಖುಷಿಯಾಗಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದುಳಿದ ಸಮಾಜಕ್ಕೆ BJP ಅನುಕೂಲ ಮಾಡಿದೆ-ಮಾಜಿ ಸಚಿವ K.S ಈಶ್ವರಪ್ಪ