Select Your Language

Notifications

webdunia
webdunia
webdunia
webdunia

ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದೆ-ಸಿಎಂ

The party has got great strength
bangalore , ಗುರುವಾರ, 3 ನವೆಂಬರ್ 2022 (15:28 IST)
ಉತ್ತರ ಕರ್ನಾಟಕ ಭಾಗದಲ್ಲಿ ಜನಸಂಕಲ್ಪ ಯಾತ್ರೆಯಿಂದ ಅಭೂತಪೂರ್ವ ಬೆಂಬಲ ಕಂಡಿದ್ದೇವೆ. ಅದು BJP ಪರವಾಗಿ, ದೊಡ್ಡ ಅಲೆಯಾಗಿ ಕಾಣ್ತಿದೆ. ಕಾಂಗ್ರೆಸ್​ನಲ್ಲಿರುವ ನಾಯಕರ ಸೇವೆಗೆ ಬೆಲೆಯೇ ಸಿಕ್ಕಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ಧಾರೆ. ಬೆಂಗಳೂರಿನಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ಸರ್ಕಾರ ಕರ್ನಾಟಕವನ್ನು ಕಂಕಣಬದ್ದವಾಗಿ ಅಭಿವೃದ್ಧಿ ಮಾಡ್ತೇವೆ ಎಂದ್ರು. ಇನ್ನು ಮುದ್ದಹನುಮೇಗೌಡ, ಶಶಿಕುಮಾರ್ BJP ಸೇರ್ಪಡೆ ವಿಚಾರವಾಗಿ ಮಾತನಾಡಿದ ಸಿಎಂ, ಮುದ್ದಹನುಮೇಗೌಡ್ರು ರಾಜಕೀಯದಲ್ಲಿ ತಮ್ಮದೇ ಆದ ಗುರುತು ಇಟ್ಟುಕೊಂಡಿದ್ಸಾರೆ. ಅವರ ಪಕ್ಷ ಸೇರ್ಪಡೆಯಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದೆ. ಶಶಿಕುಮಾರ್ ಅವ್ರು ನಮ್ಮ ಬಳಿಯೇ ಇದ್ರು. ಇವಾಗ ಮತ್ತೆ ಮರಳಿ ನಮ್ಮೊಂದಿಗೆ ಬಂದಿದ್ದಾರೆ. ಅವರಿಗೆ ಮನವರಿಕೆ ಆಗಿ ನಮ್ಮ ಮನೆಯೇ ಬೇಕು ಎಂದು ಬಂದಿದ್ದಾರೆ. ಅವ್ರು ST ಸಮುದಾಯದವರು, ಅವ್ರು ಬಂದಿರೋದು ನಮಗೆ ಮತ್ತಷ್ಟು ಶಕ್ತಿ ಬಂದಿದೆ ಎಂದರು. 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್​​ ತೊರೆದು BJP ಸೇರ್ಪಡೆ