ಕರ್ತವ್ಯ ಲೋಪವೆಸಗಿದ್ದ ಆರೋಪದಡಿ ಸೇವೆಯಿಂದ ಅಮಾನತುಗೊಂಡಿದ್ದ K.R. ಪುರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್
H.L. ನಂದೀಶ್ ಹೃದಯಾಘಾತದಿಂದಾಗಿ ಮೃತಪಟ್ಟಿದ್ರು. ಈ ಪ್ರಕರಣ ಸಂಬಂಧ ನಿನ್ನೆ ರಾತ್ರಿ GD ಪ್ರವೀಣ್ ಸೂದ್ ಸಿಎಂ ಬಸವರಾಜ್ ಬೊಮ್ಮಾಯಿಯನ್ನು ಭೇಟಿ ಮಾಡಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ನಂದೀಶ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ DG ಪ್ರವೀಣ್ ಸೂದ್ ಅವರು ನನ್ನನ್ನು ಭೇಟಿ ಮಾಡಿದ್ದಾರೆ. ತನಿಖೆ ಮಾಡಲು DGಗೆ ಸೂಚನೆ ನೀಡ್ತೀನಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದು ವರದಿ ನೀಡಲು ಸೂಚನೆ ಕೊಡ್ತೀನಿ ಎಂದು ತಿಳಿಸಿದ್ರು.