Publish Date: Thu, 03 Nov 2022 (15:22 IST)
Updated Date: Thu, 03 Nov 2022 (15:27 IST)
ಕಾಂಗ್ರೆಸ್, JDS ತೊರೆದು ಇಬ್ಬರು ನಾಯಕರು ಇಂದು BJP ಸೇರ್ಪಡೆಯಾಗಿದ್ದಾರೆ. ಮಾಜಿ ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್ ತೊರೆದು BJP ಸೇರಿದ್ದಾರೆ. JDS ಬಿಟ್ಟು ನಟ ಶಶಿಕುಮಾರ್ BJP ಸೇರಿದ್ದಾರೆ. ಚಿತ್ರದುರ್ಗದ ಚಳ್ಳಕೆರೆ ಟಿಕೆಟ್ ಆಕಾಂಕ್ಷಿಯಾಗಿರುವ ಶಶಿಕುಮಾರ್, BBMP ಮಾಜಿ ಆಯುಕ್ತ ಅನಿಲ್ ಕುಮಾರ್ ಕೂಡ BJP ಸೇರ್ಪಡೆಯಾಗಿದ್ದಾರೆ. ವಿಧಾನಸಭಾ ಚುನಾವಣೆಗೂ ಮುನ್ನವೇ ಕಾಂಗ್ರೆಸ್, JDSಗೆ ಆಘಾತವಾಗಿದ್ದು, ತುಮಕೂರಲ್ಲಿ ಕಾಂಗ್ರೆಸ್, ಚಿತ್ರದುರ್ಗದಲ್ಲಿ JDSಗೆ ಬಿಗ್ ಶಾಕ್ ಉಂಟಾಗಿದೆ. ಮಲ್ಲೇಶ್ವರದ ಜಗನ್ನಾಥ ಭವನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸೇರ್ಪಡೆ ಕಾರ್ಯಕ್ರಮ ನಡೆಯಿತು.