Publish Date: Thu, 03 Nov 2022 (15:16 IST)
Updated Date: Thu, 03 Nov 2022 (15:19 IST)
ಗುಜರಾತ್ ಮಹಾಕದನಕ್ಕೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. 2 ಹಂತಗಳಲ್ಲಿ ಗುಜರಾತ್ ವಿಧಾನಸಭಾ ಚುನಾವಣೆ ನಡೆಯಲಿದ್ದು, ಡಿಸೆಂಬರ್ 1 ಮತ್ತು 5 ರಂದು ಎಲೆಕ್ಷನ್ ನಡೆಯಲಿದೆ. ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ. ಡಿಸೆಂಬರ್ 1 ರಂದು 89 ಕ್ಷೇತ್ರಗಳಲ್ಲಿ ಮತದಾನ ನಡೆದ್ರೆ, ಡಿಸೆಂಬರ್ 5 ರಂದು 93 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತೆ. ಒಟ್ಟು 182 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ನವೆಂಬರ್ 5ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ನವೆಂಬರ್ 14 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದು, ನವೆಂಬರ್ 15 ರಂದು ನಾಮಪತ್ರಗಳ ಪರಿಶೀಲನೆ ನಡೆಯುತ್ತೆ. ನವೆಂಬರ್ 17ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿರಲಿದೆ. ಗುಜರಾತ್ ಗದ್ದುಗೆಗಾಗಿ ವಿವಿಧ ಪಕ್ಷಗಳು ರಣತಂತ್ರ ರೂಪಿಸಿದ್ದು, BJPಗೆ ಸವಾಲ್ ಹಾಕಲು ಆಮ್ ಆದ್ಮಿ, ಕಾಂಗ್ರೆಸ್ ಸಜ್ಜಾಗಿವೆ.