Select Your Language

Notifications

webdunia
webdunia
webdunia
webdunia

ದೀಪಾವಳಿ ಮುಗಿದರೂ ರಾಜಧಾನಿಯಲ್ಲಿ ನಿಲ್ಲದ ಪಟಾಕಿ ಅವಘಡ

ದೀಪಾವಳಿ ಮುಗಿದರೂ ರಾಜಧಾನಿಯಲ್ಲಿ ನಿಲ್ಲದ ಪಟಾಕಿ ಅವಘಡ
bangalore , ಗುರುವಾರ, 3 ನವೆಂಬರ್ 2022 (14:07 IST)
ದೀಪಾವಳಿ ಮುಗಿದರೂ ಪಟಾಕಿ ಅವಘಡ ಮಾತ್ರ ನಿಂತಿಲ್ಲ. ಈ ವರಗೆ ಸುಮಾರು 40 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು,ಪಟಾಕಿ ಸೀಡಿಸುವವರ ಜೊತೆಗೆ ವೀಕ್ಷಿಸಿದ ಅನೇಕ ಮಂದಿಗೆ ಪಟಾಕಿ ಎಫೆಕ್ಟ್ ಉಂಟಾಗಿದೆ ಎಂದು ಮಿಂಟೋ ಆಸ್ಪತ್ರೆಯಿಂದ ಮಾಹಿತಿ ನೀಡಿದ್ದಾರೆ.ಮೂರು ವರ್ಷದ ಅವಧಿಯಲ್ಲಿ ವರದಿಯಾದ ಗರಿಷ್ಠ ಪ್ರಕರಣಗಳು ಈ ಬಾರಿ ಆಗಿದೆ.ಪಟಾಕಿ ಬಗ್ಗೆ ಜಾಗೃತಿ ಮೂಡಿಸಿದರು ಪಟಾಕಿ ಅವಘಡಗಳು ನಿಂತಿಲ್ಲ.ಕೆಲವರ ಕಣ್ಣಿಗೆ ಗಂಭೀರ ಹಾನಿಯಾಗಿದ್ದು, ದೃಷ್ಟಿಯನ್ನು ಕಳೆದುಕೊಳ್ಳುವಂತಹ ಘಟನೆಗಳು ವರದಿಯಾಗಿವೆ.ಈ ಬಾರಿ 5 ಮಂದಿಗೆ ಗಂಭೀರವಾಗಿ ಕಣ್ಣಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.18 ಮಂದಿಗೆ ಗಂಭೀರ ಗಾಯವಾಗಿದ್ದು, ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ವೈದ್ಯರ ಮಾಹಿತಿ ನೀಡಿದ್ದಾರೆ.ಮಿಂಟೊ ಆಸ್ಪತ್ರೆಯಲ್ಲಿ ಪಟಾಕಿ ಗಾಯಕ್ಕೆ ಚಿಕಿತ್ಸೆ ಪಡೆದ 40 ಮಂದಿಯಲ್ಲಿ 21 ಮಂದಿ ಪಟಾಕಿ ಸಿಡಿಸದವರಾಗಿದ್ದಾರೆ. ಪಾದಚಾರಿ ಮಾರ್ಗದಲ್ಲಿ ಚಲಿಸು ವೇಳೆ ವೀಕ್ಷಿಸುವಾಗಲೂ 33 ಜನ ಗಾಯಗೊಂಡಿದ್ದಾರೆಂದು ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ಮಾಹಿತಿ ನೀಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ನರೇಂದ್ರ ಮೋದಿ 11ರಂದು ರಾಜಧಾನಿಗೆ ಆಗಮನ