Publish Date: Sun, 09 Oct 2022 (20:03 IST)
Updated Date: Sun, 09 Oct 2022 (20:05 IST)
ಬ್ಯಾಟರಾಯನಪುರ ಕ್ಷೇತ್ರದ ವಿದ್ಯಾರಣ್ಯಪುರದ ಮೈದಾನದಲ್ಲಿ ದಸರಾ ಉತ್ಸವ ನಡೆಯುತ್ತಿದೆ.ದಸರಾ ಉತ್ಸವದಲ್ಲಿ ದುರ್ಗಾಪರಮೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ.ಬ್ಯಾಟರಾಯನಪುರ ಕ್ಷೇತ್ರದ ಪ್ರತಿ ವಾರ್ಡ್ ಹಾಗೂ ಗ್ರಾಮಗಳಿಂದ ಬರೊಬ್ಬರಿ 130 ಪಲ್ಕಕ್ಕಿಗಳ ಆಗಮಿಸಲಿದೆ.8 ಸಾವಿರ ಮಹಿಳೆಯರಿಂದ ಪಲ್ಲಕ್ಕಿಯಲ್ಲಿರುವ ದೇವರುಗಳಿಗೆ ಮಹಾ ಆರತಿ ಮೂಲಕ ಶೋಭಾಯಾತ್ರೆಗೆ ಮಹಿಳೆಯರು ಚಾಲನೆ ನೀಡಿದಾರೆ.130 ಪಲ್ಲಕ್ಕಿಗಳ ಹಾಗೂ 30 ಕ್ಕೂ ಹೆಚ್ಚು ಕಲಾತಂಡಗಳ ಜೊತೆ 7 ಕಿ.ಮೀ ದೂರ ಮೆರವಣಿಗೆ ನಡೆಯಲಿದೆ.ದಸರಾ ಉತ್ಸವದಲ್ಲಿ ಸುಮಾರು ೫ ಸಾವಿರ ಮಹಿಳೆಯರು ಭಾಗಿಯಾಗಿದ್ದು,ಕಾರ್ಯಕ್ರದಲ್ಲಿ ವಿನಯ್ ಗುರೂಜಿ, ಬಿವೈ ವಿಜಯೇಂದ್ರ ಸಹ ಭಾಗಿಯಾಗಲಿದ್ದಾರೆ.