Select Your Language

Notifications

webdunia
webdunia
webdunia
webdunia

7 ವರ್ಷದ ಹಿಂದೆ ನಡೆದ ಕೊಲೆ ಕೇಸ್ ನ್ನ ಮತ್ತೆ ಕೈಗೆತ್ತಿಕೊಂಡ ಕೋಲಾರ ಪೊಲೀಸರು

7 ವರ್ಷದ ಹಿಂದೆ ನಡೆದ ಕೊಲೆ ಕೇಸ್ ನ್ನ ಮತ್ತೆ ಕೈಗೆತ್ತಿಕೊಂಡ ಕೋಲಾರ ಪೊಲೀಸರು
ಕೋಲಾರ , ಭಾನುವಾರ, 9 ಅಕ್ಟೋಬರ್ 2022 (19:40 IST)
ಕೋಲಾರದ ಮುಳಬಾಗಿಲು ನಗರದ ಪೇಂಟರ್ ರಮೇಶ್ (31) ಕೊಲೆ ಪ್ರಕರಣವನ್ನ ಮತ್ತೆ ಪೊಲೀಸರು ರೀ ಓಪನ್ ಮಾಡಿದ್ದಾರೆ.ಮರು ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರು ಶವವನ್ನ ಹೊರತೆಗೆದಿದ್ದಾರೆ.ಕೋಲಾರದ ಮುಳಬಾಗಿಲು ನಗರ ಹೊರವಲಯದಲ್ಲಿ 2015 ರ  ಏಪ್ರಿಲ್ 30 ರಂದು ಸುಪಾರಿ ಕೊಲೆ ನಡೆದಿತ್ತು.ಪೇಂಟರ್ ರಮೇಶ್ ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ಕೆರೆಯಲ್ಲಿನ ನೀರು ಖಾಲಿ ಮಾಡಿದ್ದಾರೆ.7 ವರ್ಷದ ಹಿಂದೆ ನಡೆದ ಕೊಲೆ ಪ್ರಕರಣದ ತನಿಖೆಯನ್ನ ಕೋಲಾರ ಪೊಲೀಸ್ ಇಲಾಖೆ ಈಗ ತನಿಖೆ ನಡೆಸುತ್ತಿದ್ದಾರೆ.
 
ಇನ್ನೂ ಸೂರಿ ಹಾಗೂ ಚೇತನ್ ಎನ್ನುವರಿಗೆ ಸುಪಾರಿ ಕೊಟ್ಟು ಕೊಲೆ‌ ಮಾಡಿಸಿದ್ದ ಮೃತ ನಗರಸಭೆ ಸದಸ್ಯ ಜಗನ್ಮೋಹನ ರೆಡ್ಡಿ.ಮುಳಬಾಗಿಲು ತಹಶೀಲ್ದಾರ್ ಶೋಭಿತಾ, ತನಿಖಾಧಿಕಾರಿ ವಸಂತ್,  ಕುಟುಂಬಸ್ಥರಾದ ಪೈಂಟರ್ ರಮೇಶ್ ಅಣ್ಣ ಮಂಜುನಾಥ್, ಅಕ್ಕ ಪುಷ್ಪ ಸಮ್ಮುಖದಲ್ಲಿ ವೈದ್ಯರು  ಈಗ ಮರು ಮರಣೋತ್ತರ ಪರೀಕ್ಷೆ  ನಡೆಸುತ್ತಿದ್ದಾರೆ.ಜೆಸಿಬಿ ಸಹಾಯದಿಂದ ಶವ ಹೊರತೆಗೆದು ಮತ್ತೊಮ್ಮೆ ಶವಸಂಸ್ಕಾರವನ್ನ ಕುಟುಂಬಸ್ಥರೇ ನೆರವೇರಿಸಿದಾರೆ.ಜಗನ್ಮೋಹನ್ ರೆಡ್ಡಿ ಕೊಲೆ ಕೇಸ್ ತನಿಖೆ ವೇಳೆ  ಅಮಾಯಕ ಪೇಂಟರ್ ರಮೇಶ್ ಕೊಲೆ ಕೇಸ್ ಬೆಳಕಿಗೆ ಬಂದಿದ್ದು.ಪ್ರಕರಣ ಸಂಬಂಧ ಈಗಾಗಲೇ ಇಬ್ಬರು ಆರೋಪಿಗಳನ್ನ  ಪೊಲೀಸರು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆರೆ ಮಾಯವಾಗಿ ಕೆರೆಯ ಜಾಗದಲ್ಲಿ ಸರ್ಕಾರಿ ಕಛೇರಿಗಳ ಉಪಟಳ