Publish Date: Sun, 09 Oct 2022 (20:00 IST)
Updated Date: Sun, 09 Oct 2022 (20:03 IST)
ಕಾಂಗ್ರೆಸ್ ವಿರುದ್ದ ಬಿಜೆಪಿ ಫೋಸ್ಟರ್ ಅಭಿಯಾನ ತೀವ್ರಗೊಂಡಿದೆ.ಚಿಕ್ಕನಾಯಕನಹಳ್ಳಿಗೆ ರಾಹುಲ್ ಪಾದಯಾತ್ರೆ ಬಂದಾಗಲೇ, ಫೋಸ್ಟರ್ ಬಿಸಿ ತಟ್ಟಿದೆ.ಎಸ್ಡಿಪಿಐ, ಪಿಎಫ್ಐ ಸಂಘಟನೆ ಫೋಷಣೆ ಮಾಡಿದ್ದು ಸಿದ್ದರಾಮಯ್ಯ ಎಂಬ ಫೋಸ್ಟರ್ ಚಿಕ್ಕನಾಯಕನಹಳ್ಳಿಯ ಹಲವು ಕಡೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಅಂಟಿಸಿದ್ದಾರೆ.
ಸಿದ್ದರಾಮಯ್ಯನವರೇ,, ನಾನು ರಾಜು.ಕಾಂಗ್ರೆಸ್ ನಿಂದಲೇ ನನ್ನ ಕೊಲೆ ಆಗಿದ್ದು,ಪಿಎಫ್ಐ, ಎಸ್ಡಿಪಿಐ ಮೇಲಿನ ನಿಮ್ಮ ಪ್ರೀತಿಯಿಂದ ಪ್ರಕರಣಗಳನ್ನು ಕೈ ಬಿಟ್ಟಿದ್ದಕ್ಕೆ ನಾನು ಕೊಲೆಯಾದೆ.ಈ ಹೆಗ್ಗಳಿಕೆ ನಿಮ್ಮಗೆ ಸಲ್ಲಲಿ ಎಂಬ ಭಿತ್ತಿ ಪತ್ರ ಅಂಟಿಸಿ ಅಭಿಯಾನ ಮಾಡಲಾಗಿದೆ.ಈ ರೀತಿ ಅಭಿಯಾನದಿಂದ ರಾಹುಲ್ ಪಾದಯಾತ್ರೆ ವೇಳೆ ಸಿದ್ದರಾಮಯ್ಯಗೆ ಮುಜುಗರ ಉಂಟಾಗಿದೆ.