Select Your Language

Notifications

webdunia
webdunia
webdunia
webdunia

ಮಗುವಿನ ಮೇಲೆ ಬೀದಿ ನಾಯಿ ಅಟ್ಯಾಕ್!

ಮಗುವಿನ ಮೇಲೆ ಬೀದಿ ನಾಯಿ ಅಟ್ಯಾಕ್!
ಬೀದರ್ , ಗುರುವಾರ, 24 ನವೆಂಬರ್ 2022 (08:53 IST)
ಬೀದರ್ : ಮನೆಯ ಮುಂದಿನ ರಸ್ತೆಯಲ್ಲಿ ಆಟವಾಡುತ್ತಿದ್ದ ವೇಳೆ ಬೀದಿ ನಾಯಿಗಳು ಏಕಾಏಕಿ ದಾಳಿ ನಡೆಸಿದ್ದು, ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಗಾಡಿವಾನ ಓಣಿಯಲ್ಲಿ ನಡೆದಿದೆ.

ಆಸ್ಮಾ ಸಮೀರ ಶೇಖ್ (2) ಮಗು ರಸ್ತೆಯಲ್ಲಿ ಆಟವಾಡುತ್ತಿದ್ದ ವೇಳೆ ಮೇಲೆರಗಿದ ಬೀದಿ ನಾಯಿ ಮುಖ ಹಾಗೂ ದೇಹದ ಹಲವು ಕಡೆ ಕಚ್ಚಿ ಗಾಯಗೊಳಿಸಿದೆ. ಬಾಲಕಿ ಚೀರಾಡುತ್ತಿದ್ದಂತೆ ಓಡಿ ಬಂದು ಪೋಷಕರು ರಕ್ಷಣೆ ಮಾಡಿದ್ದಾರೆ. 

ಬೀದಿ ನಾಯಿ ದಾಳಿಯಿಂದ ಗಂಭೀರ ಗಾಯಗೊಂಡ ಮಗುವಿಗೆ ವೈದ್ಯರು 36ಕ್ಕೂ ಹೆಚ್ಚು ಹೊಲಿಗೆ ಹಾಕಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ನಶೆಯಲ್ಲಿ ಕುಟುಂಬಸ್ಥರನ್ನು ಕತ್ತು ಸೀಳಿ ಕೊಲೆಗೈದ !?