Publish Date: Thu, 29 Dec 2022 (06:33 IST)
Updated Date: Wed, 28 Dec 2022 (21:35 IST)
ಬೆಂಗಳೂರು : ರಾಜ್ಯದಲ್ಲಿ 4ನೇ ಅಲೆ ಆತಂಕದ ಹೊತ್ತಲ್ಲಿ ಬಿಬಿಎಂಪಿ ಹೊಸ ಆಟ ಶುರು ಮಾಡಿದ್ಯಾ ಅನ್ನೋ ಅನುಮಾನ ಹೆಚ್ಚಾಗಿದೆ.
ಬಿಎಫ್.7 ಕೊರೊನಾ ದೇಶಕ್ಕೆ ಕಾಲಿಡಬಹುದು ಅನ್ನೋ ಆತಂಕದ ಬೆನ್ನಲ್ಲೇ ಇದೀಗ ಬಿಬಿಎಂಪಿ ಜನರಿಗೆ ಕಿರಿಕಿರಿ ಮಾಡೋಕೆ ಹೊರಟಂತೆ ಕಾಣುತ್ತಿದೆ.
ಕೊರೊನಾ ಟೆಸ್ಟ್ ಮಾಡದಿದ್ದರೂ ಮೊಬೈಲ್ಗೆ ಮೆಸೇಜ್ಗಳು ಬರೋಕೆ ಶುರುವಾಗಿದೆ. ಸ್ವಾಬ್ ಟೆಸ್ಟ್ ಗೆ ಕೊಡದಿದ್ದರೂ ಮೊಬೈಲ್ಗೆ ಮೆಸೇಜ್ಗಳು ಬರುತ್ತಿರುವುದು ಬೆಳಕಿಗೆ ಬಂದಿದೆ.