Select Your Language

Notifications

webdunia
webdunia
webdunia
webdunia

ಅಭಿವೃದ್ಧಿ ಹೆಸರಿನಲ್ಲಿ ನಗರದ ಹಸಿರು ಸಂಪತ್ತಿಗೆ ಬಿಬಿಎಂಪಿ ಕೊಡಲಿ ಏಟು.!

ಅಭಿವೃದ್ಧಿ ಹೆಸರಿನಲ್ಲಿ ನಗರದ ಹಸಿರು ಸಂಪತ್ತಿಗೆ ಬಿಬಿಎಂಪಿ ಕೊಡಲಿ ಏಟು.!
bangalore , ಶನಿವಾರ, 31 ಡಿಸೆಂಬರ್ 2022 (15:24 IST)
ರಸ್ತೆ ಅಗಲೀಕರಣ ಹೆಸರಲ್ಲಿ ನಗರದ 60ಕ್ಕೂ ಅಧಿಕ ಮರಗಳನ್ನ ಕಟಾವು ಮಾಡಲಾಗಿದೆ.ರಾತ್ರೋ ರಾತ್ರಿ ಅರಮನೆ ಮೈದಾನ ರಸ್ತೆಯಲ್ಲಿದ್ದ ಮರಗಳನ್ನು  ಪಾಲಿಕೆ ಕತ್ತರಿಸಿದೆ.ರಸ್ತೆ ಅಗಲೀಕರಣಕ್ಕಾಗಿ ರಸ್ತೆಯ ಇಕ್ಕೆಲಗಳ ಉದ್ದಕ್ಕೂ ಇದ್ದ ಮರಗಳು ಕಟಾವು ಮಾಡಲಾಗಿದೆ.ಸಾಲು ಸಾಲು‌ಮರಗಳ ಮಾರಣಹೋಮವನ್ನ ಪಾಲಿಕೆ ಮಾಡಿದೆ.
 
ಪ್ಯಾಲೇಸ್ ರಸ್ತೆ ಆಗಲೀಕರಣಕ್ಕೆ ಸಾಲು ಸಾಲು ಮರಗಳು ನೆಲಸಮ ಮಾಡಲಾಗಿದೆ.  50 ಕ್ಕೂ ಹೆಚ್ಚು  ಮರಗಳಿಗೆ ಪಾಲಿಕೆ ಕೊಡಲಿ ಹಾಕಿದೆ.ಬಿಬಿಎಂಪಿ ನಡೆಗೆ ಪರಿಸರ ಪ್ರೇಮಿಗಳ ಆಕ್ರೋಶ  ವ್ಯಕ್ತಪಡಿಸಿದ್ದು,ಬೆಂಗಳೂರಿನಿಂದ ಹೆಬ್ಬಾಳ ಕಡೆಗೆ ಸಾಗುವ ದಾರಿಯಲ್ಲಿರುವ ಮರಗಳನ್ನ ಕಡಿಯುವುದರ ಬಗ್ಗೆ ಸಾರ್ವಜನಿಕ ಆಕ್ಷೇಪನೆಗೆ 10 ದಿನಗಳ ಅವಧಿಯನ್ನ ಪಾಲಿಕೆ ನೀಡಿದೆ.ಇದಕ್ಕೆ ಪರ್ಯಾಯವಾಗಿ ಬೇರೆ ಕಡೆ ಸಸಿಗಳ ನೆಟ್ಟು ಪೋಷಣೆ ಮಾಡ್ತೀವಿ ಅಂತಾ ಪಾಲಿಕೆ ಹೇಳಿದೆ.ಪರಿಸರ ಪ್ರೇಮಿಗಳ ಆಕ್ಷೇಪ ಇದ್ದರು ಮರಗಳಿಗೆ ಕೊಡಲಿ ಪೆಟ್ಟನ್ನ ಪಾಲಿಕೆ ಮಾಡಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿಯವರ ಆದರ್ಶಪಾಲಿಸಬೇಕು- ಶ್ರೀರಾಮ್ ಸೇನೆ ಸಂಸ್ಥಾಪಕ ಮುತಾಲಿಕ್