ಪ್ರಧಾನಿ ಮೋದಿ ತಾಯಿ ನಿಧನ ಹಿನ್ನಲೆ ಶ್ರೀರಾಮ ಸೇನೆಯಿಂದ ನಗರದ ಖಾಸಗಿ ಹೊಟೇಲ್ ನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಮಾಡಲಾಗಿದೆ.
ನಗರದ ದ್ವಾರಕಾ ಹೊಟೇಲ್ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯುತ್ತಿದ್ದು,ಮೋದಿ ಅವರ ತಾಯಿ ನಿಧನವಾದ ಸುದ್ದಿ ಕೇಳಿ ಆಘಾತವಾಯ್ತು.ಅವರ ಆತ್ಮಕ್ಕೆ ಶಾಂತಿ ಸಿಗಲಿ.ಸರಳವಾಗಿ, ಆದರ್ಶವಾಗಿ ಮೋದಿ ಅವರು ಸಂಸ್ಕಾರ ಮಾಡಿದ್ರು.ಇಂದು ಕೂಡ ರಜೆ ತೆಗೆದುಕೊಳ್ಳದೇ ಅಂತ್ಯಕ್ರಿಯೆ ಮಾಡಿ, ಪ.ಬಂಗಾಳದ ಕೆಲಸದಲ್ಲಿ ತೊಡಗಿದ್ದಾರೆ.ಮಂತ್ರಿ, ಮುಖ್ಯಮಂತ್ರಿ, ಸಚಿವರು ಯಾರೂ ಬರಬೇಡಿ ಅನ್ನೋ ಸೂಚನೆ ಕಳಿಸಿದ್ದಾರೆ.ನಮ್ಮ ರಾಜ್ಯದಲ್ಲಿ ಆಗಿದ್ರೆ ರಜೆ ಕೊಟ್ಟು, ದೊಡ್ಡಮಟ್ಟದ ಅಂತಿಮಯಾತ್ರೆ ಮಾಡ್ತಿದ್ರು.ಆದ್ರೆ ಇದ್ಯಾವುದಕ್ಕೂ ಅವಕಾಶ ಕೊಡದೇ, ನನ್ನ ತಾಯಿಗೆ ನಾವು ಐದು ಜನ ಮಕ್ಕಳು ಇದ್ದೆವೆ ನಾವೇ ಹೆಗಲು ಕೊಡ್ತಿವಿ ಅಂತಾ ಹೇಳಿದ್ರು.ಆ ಮೂಲಕ ಪ್ರಧಾನಿ ಮೋದಿ ಆದರ್ಶರಾದ್ರು.ಎಲ್ಲ ರಾಜಕಾರಣಿಗಳು ಮೋದಿ ಆದರ್ಶಗಳನ್ನು ಪಾಲಿಸಬೇಕು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದಾರೆ.