ಸಾಗುವಾನಿ ತುಂಡು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿ ಬಂಧನ

ಶನಿವಾರ, 12 ಜನವರಿ 2019 (16:56 IST)
ಅಕ್ರಮವಾಗಿ ಸಾಗುವಾನಿ ತುಂಡುಗಳನ್ನ ಸಾಗಿಸುತ್ತಿದ್ದ ವ್ಯಕ್ತಿಯನ್ನ ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ. ಮುತ್ತಿನಕೊಪ್ಪ ಗ್ರಾಮದ ಬೇಬಿ ಬಂಧಿತ ಆರೋಪಿ. ಬಂಧಿತ ಆರೋಪಿ ಬೊಲೆರೋ ವಾಹನದಲ್ಲಿ ಅಡಿಕೆ ಸಿಪ್ಪೆ ಹಾಕಿಕೊಂಡು 9 ಸಾಗುವಾನಿ ತುಂಡುಗಳನ್ನು ಸಾಗಿಸುತ್ತಿದ್ದ.

ಈ ವೇಳೆ ಎನ್.ಆರ್.ಪುರ ಉಪಅರಣ್ಯ ವಲಯಾಧಿಕಾರಿ ಸೋಮಶೇಖರ್ ದಾಳಿ ಮಾಡಿ ವ್ಯಕ್ತಿಯನ್ನ ಬಂಧಿಸಿದ್ದಾರೆ. ಇನ್ನು ಬಂಧಿತ ಆರೋಪಿಯಿಂದ ಅರಣ್ಯಾಧಿಕಾರಿಗಳು ಒಂದು ಲಕ್ಷ ಬೆಲೆ ಬಾಳುವ 9 ಸಾಗುವಾನಿ ತುಂಡುಗಳನ್ನ ವಶ ಪಡೆಸಿಕೊಂಡಿದ್ದಾರೆ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗಮನ ಸೆಳೆದ ವಿವೇಕ ಜಾಥಾ!