ಗಮನ ಸೆಳೆದ ವಿವೇಕ ಜಾಥಾ!

ಶನಿವಾರ, 12 ಜನವರಿ 2019 (15:58 IST)
ದೇಶ ಕಂಡ ಮಹಾನ್ ತತ್ವಜ್ಞಾನಿ ಸ್ವಾಮಿ ವಿವೇಕಾನಂದರ 156 ನೇ ಜಯಂತಿಯನ್ನ  ಸಂಭ್ರಮದಿಂದ ಆಚರಿಸಲಾಯಿತು.

ವಿಶ್ವ ಹಿಂದೂ ಪರಿಷತ್ ನ ಶಾಲಾ ಮಕ್ಕಳು ವಿವೇಕಾನಂದರ ವೇಷಾಧಾರಿಗಳಾಗಿ ಚಾಮರಾಜನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಗಮನ ಸೆಳೆದರು.

ವಿವೇಕಾನಂದರ ಜಯಂತಿ ಪ್ರಯುಕ್ತ ಜಾಥ ನಡೆಸಿದ  ನೂರಾರು ಶಾಲಾ ವಿಧ್ಯಾರ್ಥಿಗಳು  ರಾಷ್ಟ್ರದ ಐಕ್ಯತೆಗೆ ಕರೆಕೊಟ್ಟು, ಜನರಲ್ಲಿ ಜಾಗೃತಿ ಮೂಡಿಸಿದರು. ದೇಶ ಕಂಡ ಮಹಾನ್ ವ್ಯಕ್ತಿಯ ಜಯಂತ್ಯುತ್ಸವದಂದು ಅವರಂತೆ ವೇಷ ಧರಿಸಿದ ಮಕ್ಕಳು ಗಮನ ಸೆಳೆದರು.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಂಗಭೂಮಿ ಶಾಶ್ವತ ಕಲೆ ಎಂದ ನಟ!