Publish Date: Thu, 10 Jan 2019 (16:57 IST)
Updated Date: Thu, 10 Jan 2019 (17:02 IST)
ಎಂ ಆರ್ ಪಿ ಎಲ್ ವಿರುದ್ಧ ಪೊರಕೆ ಮೆರವಣಿಗೆ ನಡೆಸಿ ಜೋಕಟ್ಟೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಂ ಆರ್ ಪಿ ಎಲ್ ನಾಲ್ಕನೇ ಹಂತದ ವಿಸ್ತರಣೆ ಕೈಬಿಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯ ನೇತೃತ್ವದಲ್ಲಿ ಜೋಕಟ್ಟೆ ಗ್ರಾಮಸ್ಥರು ಪೊರಕೆ ಮೆರವಣಿಗೆ ನಡೆಸಿದರು.
ಮಂಗಳೂರಿನ ಮಿನಿ ವಿಧಾನಸೌಧದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪೊರಕೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಎಂ ಆರ್ ಪಿ ಎಲ್ ನಾಲ್ಕನೇ ಹಂತದ ವಿಸ್ತರಣೆ ಸರಕಾರ ರೂಪಿಸಿದ ಪರಿಹಾರ ಕ್ರಮ ಜಾರಿಗೊಳಿಸಲು ಶೀಘ್ರ ಸಮಿತಿ ಸಭೆ ಕರೆಯಬೇಕು ಒತ್ತಾಯಿಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಈಗಿನ ಹೋರಾಟ ನಿರ್ಲಕ್ಷಿಸಿದರೆ ಈ ಹಿಂದೆ ನಡೆದ ಸಂಘರ್ಷ ಭರಿತ ಹೋರಾಟವನ್ನು ಮತ್ತೆ ನಡೆಸಲಾಗುವುದು ಎಂದು ಎಚ್ಚರಿಸಿದರು.