Select Your Language

Notifications

webdunia
webdunia
webdunia
webdunia

ಬೆಳ್ಳಂಬೆಳಗ್ಗೆ ಕಂಡು ಬೆಚ್ಚಿಬಿದ್ದ ಜನತೆ

ಬೆಳ್ಳಂಬೆಳಗ್ಗೆ ಕಂಡು ಬೆಚ್ಚಿಬಿದ್ದ ಜನತೆ
ಚಿಕ್ಕೋಡಿ , ಬುಧವಾರ, 28 ಆಗಸ್ಟ್ 2019 (16:35 IST)
ಬೆಳ್ಳಂಬೆಳಗ್ಗೆ ಅದನ್ನು ಕಂಡು ಜನರು ಬೆಚ್ಚಿಬಿದ್ದ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಎಂಟು ಅಡಿ ಉದ್ದದ ಬೃಹತ್ ಮೊಸಳೆ ಪತ್ತೆಯಾಗಿದ್ದು, ಅದನ್ನು ಕಂಡು ಸುತ್ತಲಿನ ಜನರು ಭಯಭೀತರಾಗಿದ್ದಾರೆ.

ಹೆಗಡೆ ತೋಟದ ಬಾವಿಯಲ್ಲಿ ಕಾಣಿಸಿಕೊಂಡ ಬೃಹತ್ ಮೊಸಳೆ ಇದಾಗಿದೆ. ನದಿ ದಡದಿಂದ ಪಟ್ಟಣದ ಕಡೆ ಬಂದಿರುವ ಮೊಸಳೆಯನ್ನು ಕಂಡು ಸ್ಥಳೀಯರಲ್ಲಿ ಭಯ ಆವರಿಸಿದೆ.

ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಮೊಸಳೆ ಸೆರೆಯಾಗಿದೆ.
ಸುರಕ್ಷಿತ ಸ್ಥಳಕ್ಕೆ ಮೊಸಳೆ ಸ್ಥಳಾಂತರಿಸಿದ ಅರಣ್ಯ ಸಿಬ್ಬಂದಿ ಕಾರ್ಯದಿಂದ ಜನರು ನಿಟ್ಟುಸಿರು ಬಿಟ್ಟರು.



 

Share this Story:

Follow Webdunia kannada

ಮುಂದಿನ ಸುದ್ದಿ

ಶಿಕ್ಷಕಿಯರಿಬ್ಬರ ಜತೆ ಪ್ರಿನ್ಸಿಪಾಲ್ ಕಾಮಕಾಂಡ; ವಿಡಿಯೋ ವೈರಲ್