ಕೋಳಿಗಳಿಗಾಗಿ ನೂರಾರು ಜನರಿಂದ ರಸ್ತೆ ಬಂದ್

ಶುಕ್ರವಾರ, 23 ಆಗಸ್ಟ್ 2019 (20:18 IST)
ಕೋಳಿಗಳಿಂದಾಗಿ ಸಾವಿರಾರು ಜನರು ಬೀದಿಗೆ ಬಂದು ಆಕ್ರೋಶ ವ್ಯಕ್ತಪಡಿದ್ದಾರೆ.

ಕೋಳಿ ಫಾರಂ ನಿಂದ ರೋಸಿ ಹೋದ ಜನರಿಂದ ಪ್ರತಿಭಟನೆ ನಡೆದಿದೆ. ಅವ್ಯವಸ್ಥಿತ ಕೋಳಿ ಫಾರಂ ನಿಂದ ಅನಾರೋಗ್ಯ ಉಂಟಾಗುತ್ತಿದೆ. ನೊಣಗಳ ಕಾಟದಿಂದ ಜನಸಾಮಾನ್ಯರು ರೋಸಿ ಹೋಗುವಂತಾಗಿದೆ ಅಂತ ಆರೋಪಿಸಿ ದಾವಣಗೆರೆಯಲ್ಲಿ ಶಾಮನೂರು ನಿವಾಸಿಗಳು ದಿಢೀರ್ ಪ್ರತಿಭಟನೆ ಮಾಡಿದ್ರು.

ಶಾಮನೂರು ಮತ್ತು ಮಿಟ್ಲಕಟ್ಟೆ ಗ್ರಾಮಗಳ ರಸ್ತೆ ಬಂದ್ ಮಾಡಿ ಪ್ರತಿಭಟಿಸಿದ ಸ್ಥಳೀಯರು, ಇಲ್ಲಿನ ಕೋಳಿ ಫಾರಂ ಬಂದ್ ಮಾಡುವಂತೆ ಒತ್ತಾಯ ಮಾಡಿದ್ರು. ಕಳೆದ ಹಲವಾರು ದಿನಗಳಿಂದಲೂ ಫಾರಂನಿಂದ ನೊಣಗಳ ಉತ್ಪತ್ತಿಯಾಗುತ್ತಿವೆ.

ಸರಿಯಾದ ನಿರ್ವಹಣೆ ಇಲ್ಲದೆ ಸ್ಥಳೀಯರು ಮೂಗು ಮುಚ್ಚಿ ಓಡಾಡುವಂತಾಗಿದೆ. ಇದ್ರಿಂದ ಈ ಹಿಂದೆ ಪ್ರತಿಭಟನೆ ಮಾಡಿದರೂ ಪಾಲಿಕೆ ಸ್ಪಂದಿಸಿಲ್ಲ. ಇನ್ನಾದರೂ ಕೋಳಿ ಫಾರಂ ತೆರವುಗೊಳಿಸಿ ಸ್ಥಳೀಯರಿಗೆ ಅನಾನುಕೂಲ ತಪ್ಪಿಸುಂತೆ ಪ್ರತಿಭಟನಕಾರರು ಸ್ಥಳಕ್ಕೆ ಬಂದ ಪಾಲಿಕೆ ಕಮಿಷನರ್ ಮಂಜುನಾಥ್ ಬಳ್ಳಾರಿ ಅವರಿಗೆ ಆಗ್ರಹಿಸಿದ್ರು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಿಜೆಪಿ ಶಾಸಕ ರಾಮದಾಸ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ