Publish Date: Fri, 23 Aug 2019 (20:13 IST)
Updated Date: Fri, 23 Aug 2019 (20:14 IST)
ಮೈಸೂರು ಜಿಲ್ಲೆಯ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದ್ದು, ಶಾಸಕರು ಗಾಯಗೊಂಡಿದ್ದಾರೆ.
ಶಾಸಕ ರಾಮದಾಸ್ ರಿದ್ದ ಕಾರು ಢಿಕ್ಕಿ ಹೊಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಜಾಲ್ಸೂರಿನಲ್ಲಿ ನಡೆದಿದೆ. ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ರಿಗೆ ಗಾಯಗಳಾಗಿವೆ.
ಮೈಸೂರಿನಿಂದ ಸುಳ್ಯ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದರು. ಇದೇ ವೇಳೆ ಕಾರು ಜಾಲ್ಸೂರಿನ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಬಳಿ ತಲುಪಿದಾಗ ಕಾರು ಚಾಲಕನಿಗೆ ನಿದ್ರೆ ಆವರಿಸಿದೆ. ಇದರಿಂದಾಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ಗೇಟಿನ ಬಳಿ ಇರುವ ಗೋಡೆಗೆ ಢಿಕ್ಕಿ ಹೊಡೆದಿದೆ.
ಪರಿಣಾಮ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಶಾಸಕ ರಾಮದಾಸ್ ರಿಗೆ ಗಾಯಗಳಾಗಿವೆ. ಈ ಸಂದರ್ಭದಲ್ಲಿ ಅಲ್ಲಿಯೇ ಸಮೀಪದ ಪೆಟ್ರೊಲ್ ಪಂಪ್ ನಲ್ಲಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಸಹೋದರನ ಪುತ್ರ ಶಾಸಕ ರಾಮ್ ದಾಸ್ ರನ್ನು ತಮ್ಮ ಕಾರಿನಲ್ಲಿ ಸುಳ್ಯದ ಆಸ್ಪತ್ರೆ ಕರೆದುಕೊಂಡು ಹೋದ್ರು.